ನೀವು ಬಂದರೆ ಮಾತ್ರ ಮತ ಎಂದು ಪಟ್ಟು ಹಿಡಿದ ಗ್ರಾಮಸ್ಥರು.. ಗ್ರಾಮಕ್ಕೆ ತೆರಳಿದ ನಟ ದರ್ಶನ್ - loksabha election
ಮಂಡ್ಯ: ನಟ ದರ್ಶನ್ ಗ್ರಾಮಕ್ಕೆ ಬಂದರೆ ಮಾತ್ರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾರಿಗೆ, ಮತ ಹಾಕುತ್ತೇವೆ ಎಂದು ಯಲಿಯೂರು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ತೂಬನಕೆರೆಯಲ್ಲಿ ಪ್ರಚಾರ ಮುಗಿಸಿ ಯಲಿಯೂರು ಗ್ರಾಮದಲ್ಲಿ ದರ್ಶನ್ ಮತಯಾಚನೆ ಮಾಡಬೇಕಿತ್ತು. ಆದರೆ ಸಮಯದ ಅಭಾವದಿಂದ ಕಾಳೇನಹಳ್ಳಿ ಗ್ರಾಮಕ್ಕೆ ತೆರಳಿ ಬೇರೆ ಕಡೆ ಹೋಗಲು ಯತ್ನಿಸಿದಾಗ, ಅದೇ ಗ್ರಾಮಕ್ಕೆ ಹೋಗಿದ್ದ ಗ್ರಾಮಸ್ಥರು ಯಲಿಯೂರು ಗ್ರಾಮಕ್ಕೆ ಬಂದು ಹೋದರೆ ಮಾತ್ರ ನಿಮಗೆ ಮತ ನೀಡುತ್ತೀವಿ. ಇಲ್ಲವಾದರೆ ಮತ ನೀಡುವುದಿಲ್ಲವೆಂದು ಹೇಳಿದ್ದಾರೆ. ಅಭಿಮಾನಿಗಳ ಮಾತಿಗೆ ಸೋತ ನಟ ದರ್ಶನ್ ಗ್ರಾಮಕ್ಕೆ ತೆರಳಿ ಪ್ರಚಾರ ಮಾಡಿದರು.