ಸಂಗೀತ ಕಚೇರಿ ಮೂಲಕ ಮನಸ್ಸಿನ ಬೇಸರ ಕಳೆದ ಸೋಂಕಿತರು
ತುಮಕೂರು: ತುರುವೇಕೆರೆ ತಾಲೂಕಿನ ಗುಡ್ಡೇನಹಳ್ಳಿ ಸಮೀಪದಲ್ಲಿರುವ ಸರ್ಕಾರಿ ವಸತಿ ಶಾಲೆಯಲ್ಲಿರುವ ಕೊರೊನಾ ಸೋಂಕಿತರು ತಬಲಾ, ಹಾರ್ಮೋನಿಯಂ ಬಳಸಿ ರಂಗ ಗೀತೆಗಳನ್ನು ಹಾಡುತ್ತಿದ್ದು, ಕ್ವಾರಂಟೈನ್ ಸಮಯದಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಹಲವು ದಿನಗಳಿಂದ ಹೊರ ಜಗತ್ತಿನ ನಂಟಿಲ್ಲದೆ ಬೇಸರಗೊಂಡಿರುವ ಇವರು, ಸಂಗೀತ ಕಾರ್ಯಕ್ರಮ ನಡೆಸಿ ಕೆಲ ಹೊತ್ತು ವೇದನೆ ಕಳೆಯುವ ಪ್ರಯತ್ನದಲ್ಲಿ ಮುಳುಗಿದ್ದಾರೆ. ಇವರ ಈ ಹಾಡಿನ ಕೆಲ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.