ಹಾಸನದಲ್ಲಿ ಆಲೂಗಡ್ಡೆಗೆ ಅಂಗಮಾರಿ ರೋಗ: ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುವುದೇನು? - ಆಲೂಗಡ್ಡೆ ಬೆಳೆ
ಹಾಸನ: ವಾಣಿಜ್ಯ ಬೆಳೆ ಆಲೂಗಡ್ಡೆಯನ್ನು ರೈತರು ಬಹು ನಿರೀಕ್ಷೆಯೊಂದಿಗೆ ಲಾಕ್‌ಡೌನ್ ನಡುವೆ ಬಿತ್ತನೆ ಮಾಡಿದ್ದಾರೆ. ಈ ಬಾರಿಯೂ ಮಾರಕ ಅಂಗಮಾರಿ ರೋಗಕ್ಕೆ 8,337 ಹೆಕ್ಟೇರ್ ಪೈಕಿ 2,944 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಕೊಳೆತು ಹೋಗಿದೆ. ಹೀಗಾಗಿ ಆಲೂಗೆ ಮ್ಯಾಂಕೊಜೆಬ್, ಡೈಮಿಥೋಯೇಟ್ ಅಥವಾ ಮ್ಯಾಂಕೊಜೆಬ್ ಇಮಿಡಾಕ್ಲೋಫ್ರಿಡ್ ಔಷಧ, ಮ್ಯಾಂಕೋಜೆಬ್, ಸೈಮೋಕ್ಸಾನಿಲ್ ಮತ್ತು ಕೆಲ್ತೇನ್ ಅಥವಾ ಫೆನಜಾಕ್ವಿನ್ ಔಷಧ ಸಿಂಪಡಿಸಲು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಹೆಚ್.ಆರ್.ಯೋಗೀಶ್ ಅವರು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: ದೂರವಾಣಿ ಸಂಖ್ಯೆ- 08172-262390 ಗೆ ಸಂಪರ್ಕಿಸಬಹುದು.