ಅರಮನೆಗೆ ಆಗಮಿಸಿದ ನಾಡ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹ - mysore latset news
ಮೈಸೂರು: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಾಳಾಗುವ ನಾಡ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹವನ್ನು ಅರಮನೆಗೆ ತರಲಾಯಿತು. ಚಾಮುಂಡೇಶ್ವರಿ ಬೆಟ್ಟಕ್ಕೆ ದಸರಾ ಉದ್ಘಾಟನೆ ದಿನದಂದು ಅರಮನೆಯಿಂದ ಪಂಚಲೋಹವುಳ್ಳ ಚಾಮುಂಡೇಶ್ವರಿ ವಿಗ್ರಹ ನೀಡಲಾಗುತ್ತದೆ. ಅಲ್ಲಿ ನವರಾತ್ರಿಯ ಪ್ರತಿದಿನ ತಾಯಿಗೆ ಅಲಂಕಾರ ಮಾಡಿ ನಿತ್ಯ ಪೂಜೆ ಮಾಡಲಾಗುತ್ತದೆ. ಇನ್ನು ವಿಜಯದಶಮಿಯಂದು ಚಾಮುಂಡೇಶ್ವರಿ ವಿಗ್ರಹಕ್ಕೆ ಚಾಮುಂಡಿ ಬೆಟ್ಟದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ಅರಮನೆಗೆ ತರಲಾಗುತ್ತದೆ. ಗಜಪಡೆ ಕ್ಯಾಪ್ಟನ್ ಅಭಿಮನ್ಯು ಹೊರುವ ಚಿನ್ನದ ಅಂಬಾರಿಯಲ್ಲಿ ಈ ವಿಗ್ರಹವನ್ನು ಇರಿಸಲಾಗುತ್ತದೆ.