ಕಾರ್ಗಿಲ್ ವಿಜಯ್ ದಿನದಂದೇ ಪದಗ್ರಹಣ; ಬಿಳಿ ವಸ್ತ್ರ ಹಸಿರು ಶಾಲು ಹೊದ್ದು ಬಿಎಸ್‌ವೈ ಪ್ರಮಾಣ - ರಾಜಭವನ
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂಬ ಹೆಸರಿನ ನಾನು.... ಬಿಳಿ ವಸ್ತ್ರ ಹಾಗು ಹಸಿರು ಶಾಲು ಹೊದ್ದು ಮಿಂಚಿದ ಬಿಎಸ್‌ವೈ, ದೇವರ ಹೆಸರಿನಲ್ಲಿ ಕಾರ್ಗಿಲ್ ವಿಜಯ್ ದಿನದಂದೇ 4ನೇ ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯದ ನೂತನ ಸಿಎಂಗೆ ರಾಜ್ಯದ ಪ್ರಥಮ ಪ್ರಜೆ ವಜೂಭಾಯಿ ವಾಲ ಪ್ರತಿಜ್ಞಾವಿಧಿ ಬೋಧಿಸಿದರು.
Last Updated : Jul 26, 2019, 11:52 PM IST