ಸ್ವಚ್ಛ ಮನಸ್ಸಿನ ಅಚ್ಚ ಕನ್ನಡಿಗ ಸಿಕ್ಕರೆ ಅದಿತಿ ಮದುವೆ ಆಗ್ತಾರಂತೆ! - Brahmachari MovieSong Launch today
ಬೆಂಗಳೂರು: ಬಜಾರ್ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಅಚ್ಚ ಕನ್ನಡತಿ ಅದಿತಿ ಪ್ರಭುದೇವ, ಸ್ಯಾಂಡಲ್ವುಡ್ ಬಹು ಬೇಡಿಕೆಯ ನಟಿಯಾಗಿದ್ದಾರೆ. ಇವರ ಸಿಗಂ ಚಿತ್ರದ ಶಾನೇ ಟಾಪಗೌವ್ಳೆ ನಮ್ ಹುಡ್ಗಿ ಹಾಡಿನಲ್ಲಿ ನೋಡಿದ ಅದೆಷ್ಟೋ ಹುಡುಗರಿಗೆ ಪಾರಿ ಮೇಲೆ ಪ್ಯಾರ್ ಆಗಿದೆ. ಇಂದು ಬ್ರಹ್ಮಚಾರಿ ಚಿತ್ರ ಆರಂಭ ಆರಂಭ ಸಾಂಗ್ ಲಾಂಚ್ ವೇಳೆ ಮದುವೆ ಬಗ್ಗೆ ಮಾತನಾಡಿದ ಅದಿತಿ ಪ್ರಭುದೇವ, ನಾನು ಮದುವೆಗೆ ರೆಡಿ ಇದ್ದೀನಿ. ಮದುವೆ ಆಗಿಲ್ಲ ಅಂದ್ರೆ ಲೈಫ್ ಕಂಪ್ಲೀಟ್ ಅನ್ಸಲ್ಲ. ಮದುವೆ ಆಗೋ ಟೈಂ ಬಂದಾಗ ಒಳ್ಳೆ ಸಂಸ್ಕಾರ ಇರೋ ಸ್ವಚ್ಚ ಮನಸ್ಸಿನ ಅಚ್ಛ ಕನ್ನಡಿಗ ಸಿಕ್ಕಿದ್ರೆ ನಾನು ಕಣ್ಮುಚ್ಚಿಕೊಂಡು ಮದುವೆ ಆಗ್ತೀನಿ ಎಂದಿದ್ದಾರೆ.