ಗಂಜಿ ಕೇಂದ್ರದಲ್ಲಿ ಊಟ ಮಾಡಿದ ಸಿಎಂ ಪುತ್ರ
ಮೈಸೂರು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿ ನಿಯೋಗ ಭೇಟಿ ನೀಡಿ ಖುದ್ದು ಪರಿಸ್ಥಿತಿ ಅವಲೋಕಿಸಿತು. ಮುಖ್ಯಮಂತ್ರಿ ಯಡಿಯೂರಪ್ಪ ಆದೇಶದ ಹಿನ್ನೆಲೆಯಲ್ಲಿ ಅವರ ಮಗ ಬಿ.ವೈ. ವಿಜಯೇಂದ್ರ, ಶಾಸಕ ರಾಮದಾಸ್ ಹಾಗೂ ಸ್ಥಳೀಯ ಶಾಸಕರು ಪ್ರವಾಹ ಪೀಡಿತ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು. ನಂತರ ಗಂಜಿ ಕೇಂದ್ರದಲ್ಲೇ ಶಾಸಕರ ಜೊತೆ ಊಟ ಮಾಡಿದ ಅವರು ಪ್ರವಾಹದಿಂದ ಮನೆ ಮಠ ಕಳೆದುಕೊಂಡ ಜನರಿಗೆ ಸಾಂತ್ವನ ಹೇಳಿದರು.