ಮುಗಿದ ಮತದಾನ... ಮೊಮ್ಮಗಳ ಜೊತೆ ಆಟವಾಡಿದ ಬಿಜೆಪಿ ಅಭ್ಯರ್ಥಿ! - news kannada
ಲೋಕಸಭೆ ಚುನಾವಣೆಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಸಂಚರಿಸಿ ಹೈರಾಣಾಗಿದ್ದ ಬೆಳಗಾವಿ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಇಂದು ಇಡೀ ದಿನ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದು ರಿಲ್ಯಾಕ್ಸ್ ಆದರು. ಇಲ್ಲಿನ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುರೇಶ ಅಂಗಡಿ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಮೊಮ್ಮಗಳ ಜತೆಗೆ ಸಮಯ ಕಳೆದರು. ಮೊಮ್ಮಗಳ ಜೊತೆ ಕೆಲಹೊತ್ತು ಆಟವಾಡಿ ರಿಲ್ಯಾಕ್ಸ್ ಆದರು.