ಕೂಲಿ ಕಾರ್ಮಿಕರ ನೆರವಿಗೆ ನಿಂತು ನಿಜ ಜೀವನದಲ್ಲ 'ಬಿಗ್ ಬಾಸ್' ಆದ ಶೈನ್ ಶೆಟ್ಟಿ - ಶೈನ್ ಶೆಟ್ಟಿ
ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ವಿನ್ನರ್ ಶೈನ್ ಶೆಟ್ಟಿ ದಿನಗೂಲಿ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ. ಶೈನ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊಂದನ್ನ ಅಪ್ಲೋಡ್ ಮಾಡುವ ಮೂಲಕ ಇತರರಿಗೂ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಐರನ್ ಅಂಗಡಿ, ಎಳನೀರು, ಹೂ ಮಾಡುವವರು, ಫುಡ್‍ಟ್ರಕ್ ಇಟ್ಟುಕೊಂಡಿರುವವರು, ಬೀದಿ ಬದಿ ವ್ಯಾಪಾರಿಗಳು, ಗಾರೆ ಕೆಲಸಕ್ಕೆ ಹೋಗುವವರ ಬಗ್ಗೆ ಯೋಚಿಸಿದರೆ ಅವರ ಪರಿಸ್ಥಿತಿ ಭಯವಾಗುತ್ತದೆ. ಇಡೀ ತಿಂಗಳ ರೇಷನ್, ಸಾಲಕ್ಕೆ ಬಡ್ಡಿ, ಊಟದ ಯೋಚನೆ ಬಂದಾಗ ನಾನು ನನ್ನ ತಂಡದವರು ಸೇರಿ ಸಹಾಯ ಮಾಡುವುದಕ್ಕೆ ಯೋಚನೆ ಮಾಡಿದ್ದೇವೆ. ಸದ್ಯಕ್ಕೆ ಬನಶಂಕರಿ ಮತ್ತು ಚೆನ್ನಮ್ಮನ ಕೆರೆ ಪೊಲೀಸ್ ಸಿಬ್ಬಂದಿಯ ಸಹಾಯ ಪಡೆದು, ದಿನಗೂಲಿ ಕಾರ್ಮಿಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸಹಕಾರ ನೀಡುತ್ತಿದ್ದೇವೆ. ಅವರಿಗೆ ಇಡೀ ತಿಂಗಳ ಮನೆ ರೇಷನ್ ಮತ್ತು ಬಾಡಿಗೆ ಕೊಡುವ ಮೂಲಕ ಸಹಾಯ ಮಾಡುತ್ತಿದ್ದೇವೆ ಎಂದಿದ್ದಾರೆ.