ಕರ್ನಾಟಕ

karnataka

ETV Bharat / videos

ಶಾಂತಿಯುತವಾಗಿ ನೆರವೇರಿದ ಭದ್ರಾವತಿಯ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ

By

Published : Sep 10, 2019, 11:22 PM IST

ಶಿವಮೊಗ್ಗ: ಭದ್ರಾವತಿಯ ಗಲಾಟೆ ಗಣಪ ಎಂದೆ ಪ್ರಸಿದ್ಧಿ ಹೊಂದಿರುವ ಹಿಂದೂ ಮಹಾಸಭಾ ಗಣಪತಿಯ ನಿಮಜ್ಜನ ಪೂರ್ವ ಮೆರವಣಿಗೆ ಶಾಂತಿಯುತವಾಗಿ ಮುಕ್ತಾಯವಾಗಿದೆ. ಭದ್ರಾವತಿ ಪಟ್ಟಣದ ಹೊಸಮನೆ ಬಡಾವಣೆಯಲ್ಲಿ ಪ್ರತಿಷ್ಠಾಪಿಸುವ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಯು ಬೆಳಗ್ಗೆ ಪ್ರಾರಂಭವಾಗಿ ರಾತ್ರಿ 9 ಗಂಟೆ ತನಕ ನಡೆಯಿತು. ಮೆರವಣಿಗೆಯಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಗಣಪತಿಯ ಮೆರವಣಿಗೆ ಶಾಂತಿಯುತವಾಗಿ ನಡೆಸಲು ಪೊಲೀಸ್ ಇಲಾಖೆ ಆರ್​ಎಎಫ್, ಡಿಆರ್ ಸೇರಿದಂತೆ ವಿವಿಧ ಪೊಲೀಸ್ ತುಕಡಿಗಳನ್ನು ಎಸ್ಪಿ ಶಾಂತರಾಜು ಬಳಸಿಕೊಂಡರು.

ABOUT THE AUTHOR

...view details