ಇನ್ನೂ ಸಿಗದ ಪರಿಹಾರ... ನೆರೆ ಸಂತ್ರಸ್ತರ ಗೋಳು ಕೇಳೋರು ಯಾರು? - ಪ್ರವಾಹ ಪೀಡಿತ ಜನರು
ಬೆಳಗಾವಿ ಜಿಲ್ಲೆಯು ಪ್ರಚಂಡ ಪ್ರವಾಹಕ್ಕೆ ಅಕ್ಷರಶಃ ನಲಗಿ ಹೋಗಿತ್ತು. ತಕ್ಷಣವೇ ಸಂತ್ರಸ್ತರಿಗೆ ಹತ್ತು ಸಾವಿರ ರೂ. ಚೆಕ್ ನೀಡಬೇಕು ಎಂದು ಸರ್ಕಾರ ಆದೇಶಿಸಿದರೂ ಹಲವರಿಗೆ ಇನ್ನೂ ಚೆಕ್ ಸಿಕ್ಕಿಲ್ಲ. ಆ ಚೆಕ್ನ್ನೇ ತಲುಪಿಸದ ಸರ್ಕಾರ ಮನೆಗಳನ್ನು ಯಾವಾಗ ನಿರ್ಮಿಸುತ್ತೆ, ಬೆಳೆಗಳಿಗೆ ಪರಿಹಾರ ಯಾವಾಗ ಕೊಡುತ್ತೆ ಅನ್ನುವ ಆತಂಕದಲ್ಲಿ ಸಂತ್ರಸ್ತರಿದ್ದಾರೆ. ಸಂಕಷ್ಟದಲ್ಲಿರುವ ಸಂತ್ರಸ್ತರ ಪರವಾಗಿ ನಿಲ್ಲಬೇಕಿದ್ದ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿ ತೋರಿ ಅವರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ.