ಆಯುಧ ಪೂಜೆ: ಸಶಸ್ತ್ರ ಮೀಸಲು ಪಡೆಯ ಆಯುಧಗಳಿಗೆ, ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಎಸ್ಪಿ
ರಾಯಚೂರು: ನಾಡಹಬ್ಬ ದಸರಾ ಹಬ್ಬದ ನಿಮಿತ್ತ ಇಂದು ರಾಯಚೂರು ಜಿಲ್ಲೆಯಾದ್ಯಂತ ಆಯುಧ ಪೂಜೆಯನ್ನ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜನರು ಬೆಳಗ್ಗೆಯಿಂದಲೇ ವಾಹನಗಳು, ಆಯುಧಗಳನ್ನ ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಿದರು. ಇತ್ತ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಯುಧಗಳಿಗೆ ಹಾಗೂ ವಾಹನಗಳಿಗೆ ವಿಶೇಷವಾಗಿ ಹೂಗಳಿಂದ ಅಲಂಕಾರಿಸಲಾಗಿತ್ತು. ಬಳಿಕ ಎಸ್ಪಿ ನಿಕ್ಕಂ ಪ್ರಕಾಶ್ ವಿಶೇಷ ಪೂಜೆ ಸಲ್ಲಿಸಿ ಆಯುಧ ಪೂಜೆಯನ್ನ ನೆರವೇರಿಸಿದರು. ಈ ವೇಳೆ ಹೆಚ್ಚುವರಿ ಎಸ್ಪಿ ಹರಿಬಾಬು ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.