ಮೈಸೂರಿನಲ್ಲಿ ಪಟಾಕಿ ಬಿಡಿ ಸಂದೇಶದೊಂದಿಗೆ ಜಾಗೃತಿ
ಮೈಸೂರು: ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸಿ ಪರಿಸರ ಮಾಲಿನ್ಯ ಮಾಡಬೇಡಿ. ಬೆಳಕಿನ ಹಬ್ಬದಲ್ಲಿ ಬೆಳಕು ಮಾತ್ರ ಕಾಣಲಿ ಎಂಬ ಸಂದೇಶದೊಂದಿಗೆ ಜಾಗೃತಿ ಮೂಡಿಸಲಾಯಿತು. ನಗರದ ಬಸ್ ನಿಲ್ದಾಣದ ಸಮೀಪ ವಿವಿಧ ಸಂಘಟನೆಗಳು ಸೇರಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ಬಸ್ ನಿಲ್ದಾಣದ ಒಳಗೆ ಬರುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಣ್ಣಿನ ದೀಪಗಳನ್ನು ನೀಡಿ ಶುಭ ಕೋರಿದರು.