ಹೇಮಾವತಿ ನೀರಿನಿಂದ ಭರ್ತಿಯಾಗುತ್ತಿದೆ ತುಮಕೂರಿನ ಅಮಾನಿಕೆರೆ - ತುಮಕೂರು ಅಮಾನಿಕೆರೆ ನ್ಯೂಸ್
ತುಮಕೂರು: ಹಾಸನದ ಗೊರೂರಿನ ಹೇಮಾವತಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಗೆ ಅವಧಿಗೂ ಮುನ್ನವೇ ಅಪಾರ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ. ಅನೇಕ ವರ್ಷಗಳಿಂದ ಮಳೆ ನೀರಿನಿಂದ ಭರ್ತಿಯಾಗದ ತುಮಕೂರಿನ ಅಮಾನಿಕೆರೆ ಇದೀಗ ಹೇಮಾವತಿ ನದಿ ನೀರಿನಿಂದ ಭರ್ತಿಯಾಗುತ್ತಿದೆ.