ಕಾಫಿ ನಾಡಿನಲ್ಲಿ ಸಂಭ್ರಮದ ನವರಾತ್ರಿ ಉತ್ಸವ: ಹೊರನಾಡು, ಶೃಂಗೇರಿಯಲ್ಲೂ ವಿಶೇಷ ಪೂಜೆ - ವಿಧುಶೇಖರ ಭಾರತೀ ಸ್ವಾಮೀಜಿ
ಕಾಫಿ ನಾಡಿನ ಧಾರ್ಮಿಕ ಕ್ಷೇತ್ರವಾದ ಹೊರನಾಡು, ಶೃಂಗೇರಿಯಲ್ಲಿ ನಿನ್ನೆ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದೆ. ಶೃಂಗೇರಿಯಲ್ಲಿ ಶಾರದಾಂಬೆಗೆ ಅಭಿಷೇಕ ಮಾಡುವುದರೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ಶಾರದಾಂಬೆಗೆ ನಿತ್ಯ ವಿಶೇಷ ಪೂಜೆ ನಡೆಯಲಿದೆ.