ರಸ್ತೆ ದಾಟುತ್ತಾ ಜೀಪ್ಗೆ ನುಗ್ಗಿದ 15 ಅಡಿ ಉದ್ದದ ಕಾಳಿಂಗ ಸರ್ಪ..ಸ್ನೇಕ್ ಪಿಯುಷ್ರಿಂದ ರಕ್ಷಣೆ - kalinga-snake jumped-into-a-jeep
ಸಂಪಾಜೆ (ಕೊಡಗು): ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪವೊಂದು ಹೆದ್ದಾರಿ ದಾಟುವಾಗ ಎದುರು ಸಿಕ್ಕ ಅರಣ್ಯ ಇಲಾಖೆಯ ಜೀಪ್ಗೆ ನುಗ್ಗಿದೆ. ಸರ್ಪವನ್ನು ಹೊರ ತೆಗೆಯಲು ಅರಣ್ಯ ಸಿಬ್ಬಂದಿ ಸಾಕಷ್ಟು ಪ್ರಯತ್ನ ಪಟ್ಟಿತಾದರೂ, ಸ್ನೇಕ್ ಪಿಯುಷ್ ಬಂದ ಬಳಿಕ ಕೊನೆಗೆ ಸೆರೆ ಹಿಡಿದಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯದಿಂದ ಕಾಳಿಂಗನನ್ನು ಕಾಡಿಗೆ ಬಿಡಲಾಗಿದೆ.