ಜೆಡಿಎಸ್ ವಿರುದ್ಧ ಮತ್ತೆರಡು ವಿಡಿಯೋ ಟ್ರೋಲ್ - undefined
ಮಂಡ್ಯ: ಲೋಕ ಸಮರದಲ್ಲಿ ಟ್ರೋಲ್ ಮೇಲೆ ಟ್ರೋಲ್‌ಗಳ ಸುರಿಮಳೆ ಆಗುತ್ತಿದೆ. ಅದರಲ್ಲೂ ಜೆಡಿಎಸ್ ವಿರುದ್ಧವೇ ಅತಿ ಹೆಚ್ಚು ಟ್ರೋಲ್ ಸದ್ದು ಆಗಿರೋದು ವಿಶೇಷ. ಇಂತಹ ಟ್ರೋಲ್ ಸದ್ದಿಗೆ ಮತ್ತೆರಡು ವಿಡಿಯೋಗಳು ಸೇರಿಕೊಂಡಿವೆ. ಹರಿಕಥೆ ಮಾದರಿಯಲ್ಲಿ ದೇವೇಗೌಡರ ಕುಟುಂಬದ ರಾಜಕೀಯ ಕಥೆಯನ್ನು ಕಟ್ಟಲಾಗಿದೆ. ಮತ್ತೊಂದು ವಿಡಿಯೋದಲ್ಲಿ ಮಂಡ್ಯ ಜಿಲ್ಲೆಯ ರಾಜಕೀಯ ಕುರಿತು ಯುವಕನೋರ್ವ ಅಭಿನಯ ಮಾಡಿದ್ದಾನೆ. ಇಲ್ಲಿ ನಿಖಿಲ್‌ರನ್ನು ಸೋಲಿಸಿ ಸುಮಲತಾ ಗೆಲ್ಲಿಸಿ ಎಂದು ಸಂದೇಶ ನೀಡಿದ್ದಾನೆ. ಈ ಎರಡೂ ವಿಡಿಯೋಗಳು ಈಗ ಸಖತ್ ವೈರಲ್ ಆಗಿವೆ. ಜೊತೆಗೆ ಚರ್ಚೆಗೂ ಕಾರಣವಾಗಿವೆ.