117 ಶಾಲೆ ಶಿಥಿಲ... ನೂರಾರು ಶಾಲೆಗಳಿಗಿಲ್ಲ ದೈಹಿಕ ಶಿಕ್ಷಕರು! - latest chamrajnagar news
ಚಾಮರಾಜನಗರ ಜಿಲ್ಲೆಯಲ್ಲಿರುವ 854 ಪ್ರಾಥಮಿಕ ಶಾಲೆಗಳಲ್ಲಿ 117 ಶಾಲೆಗಳ ಸ್ಥಿತಿ ಶೋಚನೀಯವಾಗಿದ್ದು, ಮಳೆ ಬಂದಾಗ ಶಾಲಾ ಕೊಠಡಿಗಳಿಗೆ ನೀರು ನುಗ್ಗುತ್ತದೆ. ಅಲ್ಲದೆ, ಚಾವಣಿಗಳು ಸೋರುತ್ತಿರುತ್ತವೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ಅತಿಥಿ ಶಿಕ್ಷಕರ ಮೂಲಕ ತುಂಬಿದ್ದರೂ ಸಹ 15ಕ್ಕೂ ಹೆಚ್ಚು ಶಾಲೆಗಳಿಗೆ ಇಂಗ್ಲಿಷ್ ಭಾಷಾ ಶಿಕ್ಷಕರ ಕೊರತೆಯಿದೆ.