ಕರ್ನಾಟಕ

karnataka

ETV Bharat / videos

ಗೋಕಾಕ್​ ನೆರೆ ಸಂತ್ರಸ್ತರ ಕಣ್ಣೀರು ಒರೆಸಿದ್ರು ನಟಿ ಹರ್ಷಿಕಾ

By

Published : Aug 14, 2019, 11:13 AM IST

Updated : Aug 14, 2019, 1:41 PM IST

ಸ್ಯಾಂಡಲ್​​ವುಡ್​ ನಟಿ ಹರ್ಷಿಕಾ ಪೂಣಚ್ಚ ನೆರೆ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್​ ತಾಲೂಕಿನ ಅದಿಬಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯ ಜನರ ಸಂಕಷ್ಟ ಆಲಿಸಿದ್ದಾರೆ. ಹರ್ಷಿಕಾ ಅವರಿಗೆ ನಟ ಭುವನ ಸಾಥ್​ ನೀಡಿದ್ರು. ಕಳೆದ ಒಂದು ವಾರದಿಂದ ಸುರಿದ ಮಳೆಗೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಸಂಪೂರ್ಣ ನೆರೆಗೆ ತುತ್ತಾಗಿದೆ. ಸಂಕಷ್ಟದಲ್ಲಿರುವ ಇಲ್ಲಿಯ ಜನರ ನೆರವಿಗೆ ಕನ್ನಡ ಚಿತ್ರರಂಗ ಧಾವಿಸಿದೆ. ಮೊನ್ನೆಯಷ್ಟೇ ನಟಿ ಹರ್ಷಿಕಾ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ್ದರು.
Last Updated : Aug 14, 2019, 1:41 PM IST

ABOUT THE AUTHOR

...view details