'ಬ್ಯಾಡ್ ಮ್ಯಾನರ್ಸ್' ಚಿತ್ರೀಕರಣ ಪ್ರಾರಂಭ: ತಾಯಿ ಜೊತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಯಂಗ್ ರೆಬಲ್ ಸ್ಟಾರ್ - ಕನ್ನಡ ಹೊಸ ಸಿನಿಮಾಗಳು
ಇಂದಿನಿಂದ ಅಭಿಷೇಕ್ ಅಂಬರೀಷ್ ಅಭಿನಯದ ಎರಡನೇ ಚಿತ್ರ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಇದಕ್ಕೂ ಮುನ್ನ ಚಿತ್ರತಂಡದ ಜೊತೆ ತಾಯಿ ಹಾಗೂ ಸಂಸದೆ ಸುಮಲತಾರೊಂದಿಗೆ ನಟ ಅಭಿಷೇಕ್ ಅಂಬರೀಷ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. 'ಅಮರ್' ಚಿತ್ರದ ನಂತರ ನಟ ಅಭಿಷೇಕ್ ಸೂರಿ ನಿರ್ದೇಶನದಲ್ಲಿ 'ಬ್ಯಾಡ್ ಮ್ಯಾನರ್ಸ್' ಇಟ್ಟುಕೊಂಡು ಅಭಿಮಾನಿಗಳ ಮುಂದೆ ಬರೋಕೆ ತಯಾರಿ ನಡೆಸಿದ್ದಾರೆ. ಇಂದಿನಿಂದ ಚಿತ್ರದ ಶೂಟಿಂಗ್ ಮಂಡ್ಯ ಹಾಗೂ ಮೈಸೂರಿನ ಸುತ್ತಮುತ್ತಲೂ ನಡೆಯಲಿದೆ.