ತಂದೆಗೆ ಗೌರವಯುತವಾಗಿ ರಾಜಕೀಯ ನಿವೃತ್ತಿಗೆ ಅವಕಾಶ ಮಾಡಿಕೊಡಿ : ಯತೀಂದ್ರ ಸಿದ್ದರಾಮಯ್ಯ ಭಾವನಾತ್ಮಕ ಭಾಷಣ
ಮೈಸೂರು : ಮಂಗಳವಾರ ರಾತ್ರಿ ವರುಣಾ ಕ್ಷೇತ್ರದ ಗ್ರಾಮಗಳಲ್ಲಿ ತಂದೆ ಸಿದ್ದರಾಮಯ್ಯ ಪರ ಮಗ ಯತೀಂದ್ರ ಸಿದ್ದರಾಮಯ್ಯ ಚುನಾವಣಾ ಪ್ರಚಾರ ಮಾಡಿ, ತಂದೆ ಸಿದ್ದರಾಮಯ್ಯನವರ ಕೊನೆಯ ಚುನಾವಣೆ ಇದಾಗಿದೆ. ಗೌರವಯುತವಾಗಿ ಅವರನ್ನು ಚುನಾವಣಾ ರಾಜಕೀಯದಿಂದ ನಿವೃತ್ತರಾಗಲು ಅವಕಾಶ ಮಾಡಿಕೊಡಿ ಎಂದು ಕೈಮುಗಿದು ಬೇಡಿಕೊಳ್ಳುತ್ತೇನೆ ಎಂದು ಚುನಾವಣಾ ಪ್ರಚಾರದಲ್ಲಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಭಾವನಾತ್ಮಕವಾಗಿ ಭಾಷಣ ಮಾಡಿದರು.
ಕೊನೆಯ ಚುನಾವಣೆ ಎಂದು ಒತ್ತಿ ಒತ್ತಿ ಹೇಳಿದ ಶಾಸಕ ಡಾ. ಯತೀಂದ್ರ ಅವರು, ಬಡವರ, ರೈತರ, ಹಿಂದುಳಿದವರ, ದಲಿತರ ಹಾಗೂ ಅಲ್ಪಸಂಖ್ಯಾತರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಿದ್ದರಾಮಯ್ಯನವರಿಗೆ ಇದು ಕೊನೆಯ ಚುನಾವಣೆ ಆಗಿದ್ದು, ದಲಿತ, ಬಡವರ ವಿರೋಧಿಯಾದ ಬಿಜೆಪಿ ಪಕ್ಷವನ್ನು ಕಿತ್ತು ಬಿಸಾಕಿ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದರು.
ಬಿಜೆಪಿ ಬಡವರಿಗೆ ಖರ್ಚು ಮಾಡುವುದಿಲ್ಲ. ಶ್ರೀಮಂತ ಉದ್ಯಮಿಗಳಿಗೆ ಖರ್ಚು ಮಾಡುತ್ತದೆ. ನಾವು ಬಡವರಿಗೆ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಈಗ ಹಳ್ಳಿಗಳಲ್ಲಿ ಕರೆಂಟ್ ಬಿಲ್ ಕಟ್ಟಲು ಆಗುತ್ತಿಲ್ಲ. ಪೆಟ್ರೋಲ್, ಡಿಸೇಲ್, ಸಿಲಿಂಡರ್ ಬೆಲೆ ಜಾಸ್ತಿ ಆಗಿದೆ. ಬಡವರು ಬದುಕುವುದು ಕಷ್ಟವಾಗಿದೆ ಎಂದು ಯತೀಂದ್ರ ಈ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ :ಕಾಂಗ್ರೆಸ್ ಭದ್ರಕೋಟೆಗೆ ಕೇಸರಿ ಲಗ್ಗೆ: ಇದೇ ಮೊದಲ ಬಾರಿ ಮುಸ್ಲಿಂ ಕಾಲೊನಿಗಳಲ್ಲಿ ಮತಯಾಚನೆ