ಕರ್ನಾಟಕ

karnataka

ಜಿ 20 ಅಡಿಯಲ್ಲಿ ಯೂತ್ 20 ಇನ್ಸೆಪ್ಶನ್ ಸಭೆ

ETV Bharat / videos

ಜಿ 20 ಅಡಿ ಯೂತ್ 20 ಇನ್ಸೆಪ್ಶನ್ ಸಭೆ: ಪ್ರಸ್ತುತ ಜಾಗತೀಕ ಸಮಸ್ಯೆಗಳ ಬಗ್ಗೆ ಯುವಜನತೆಯೊಂದಿಗೆ ಚರ್ಚೆ

By

Published : Feb 6, 2023, 10:51 PM IST

Updated : Feb 14, 2023, 11:34 AM IST

ಗುವಾಹಟಿ(ಅಸ್ಸೋಂ):ನಾವೀನ್ಯತೆ ಮತ್ತು 21 ನೇ ಶತಮಾನ, ಹವಾಮಾನ ಬದಲಾವಣೆ ಮತ್ತು ವಿಪತ್ತು ಅಪಾಯ ಕಡಿತ, ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸುವುದು, ಯುದ್ಧವಿಲ್ಲದ ಯುಗವನ್ನು ಪ್ರಾರಂಭಿಸುವುದು, ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಯುವಜನತೆ ಎಂಬ ಐದು ಪ್ರಮುಖ ವಿಚಾರಗಳ ಬಗ್ಗೆ ಜಿ20 ಅಡಿ ಆಯೋಜಿಸಲಾದ ಯೂತ್ 20 ಇನ್ಸೆಪ್ಶನ್ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಯುವ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮೀತಾ ರಾಜೀವ್ ಲೋಚನ್ ಹೇಳಿದ್ದಾರೆ. 

ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ ನಡೆಯುತ್ತಿರುವ ಯೂತ್ 20 ಇನ್ಸೆಪ್ಶನ್ ಮೀಟಿಂಗ್ ಉದ್ದೇಶಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಇಂದಿನಿಂದ ಮೂರು ದಿನಗಳ ಕಾಲ ವೈ20 ಸಭೆಗಳು ಜಿ 20 ಶೃಂಗಸಭೆಯ ನಿಮಿತ್ತ ನಡೆಯಲಿದೆ. ಪ್ರತಿಯೊಂದು ದೇಶವು ಸಮಸ್ಯೆಗಳ ಬಗ್ಗೆ ತನ್ನದೇ ಆದ ಅಭಿಪ್ರಾಯಗಳನ್ನು ಹೊಂದಿದೆ. ಈ ಸಭೆಗಳು ದೇಶಾದ್ಯಂತ ವಿವಿಧ ಶಿಫಾರಸುಗಳನ್ನು ಮಾಡಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸ್ಸೋಂ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ಚಕ್ರವರ್ತಿ, ಯುವ ವ್ಯವಹಾರಗಳ ಸಚಿವಾಲಯ ಮತ್ತು ರಾಜ್ಯ ಸರ್ಕಾರವು ಯುವಜನರಲ್ಲಿ Y20 ಬಗ್ಗೆ ಜಾಗೃತಿ ಮೂಡಿಸಲು ಮತ್ತು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಅವರನ್ನು ತೊಡಗಿಸಿಕೊಳ್ಳಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅಸ್ಸಾಂನ ಸುಮಾರು 36 ಶಿಕ್ಷಣ ಸಂಸ್ಥೆಗಳು ಮತ್ತು  4000 ಶಾಲೆಗಳು ವೈ 20ಯ ಐದು ವಿಷಯಗಳ ಕುರಿತು ವಿಚಾರ ಸಂಕಿರಣಗಳು, ಚರ್ಚಾಗೋಷ್ಠಿಗಳು, ಕಾರ್ಯಾಗಾರಗಳು ಮತ್ತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿವೆ ಎಂದು ಅವರು ಹೇಳಿದರು. 

ಇದನ್ನೂ ಓದಿ:ಜಿ 20 ಶೃಂಗಸಭೆಯಲ್ಲಿ ಜಾಗತಿಕ ನಾಯಕರಿಗೆ ಗುಜರಾತ್​- ಹಿಮಾಚಲ ಪ್ರದೇಶದ ಕಲಾಕೃತಿಗಳನ್ನು ಉಡುಗೊರೆ ನೀಡಿದ ಪ್ರಧಾನಿ ಮೋದಿ

Last Updated : Feb 14, 2023, 11:34 AM IST

ABOUT THE AUTHOR

...view details