ವಿಜಯಪುರದ ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ಭಾರ ಎತ್ತುವ ಸ್ಪರ್ಧೆ-ವಿಡಿಯೋ - ಭಾರ ಎತ್ತುವ ಸ್ಪರ್ಧೆ
Published : Jan 18, 2024, 9:10 AM IST
ವಿಜಯಪುರದಲ್ಲಿಶ್ರೀ ಸಿದ್ದೇಶ್ವರ ಜಾತ್ರೋತ್ಸವ ನಡೆಯುತ್ತಿದೆ. ಕಳೆದೊಂದು ವಾರದಿಂದ ಭೋಗಿ, ಅಕ್ಷತಾರ್ಪಣೆ, ಹೋಮ, ಹವನ ಸೇರಿದಂತೆ ನಾನಾ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಬುಧವಾರ ಭಾರ ಎತ್ತುವ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ವಿವಿಧ ವಯೋಮಾನದವರು ನಾನಾ ವಿಭಾಗಗಳಲ್ಲಿ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳದಲ್ಲಿ ನೆರೆದಿದ್ದ ಜನತೆ ಚಪ್ಪಾಳೆ, ಶಿಳ್ಳೆಗಳ ಮೂಲಕ ಈ ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಿದರು.
ನಾನಾ ತೂಕ ಹೊಂದಿದ್ದ ಗುಂಡು ಕಲ್ಲುಗಳು, ಸಂಗ್ರಾಣಿ ಕಲ್ಲುಗಳು ಮತ್ತು ಚೀಲಗಳನ್ನು ಎತ್ತುವ ಸ್ಪರ್ಧೆಗಳಲ್ಲಿ ಸುತ್ತಮುತ್ತಲಿನ ಜಿಲ್ಲೆ, ಮಹಾರಾಷ್ಟ್ರದಿಂದಲೂ ಜನರು ಪಾಲ್ಗೊಂಡಿದ್ದರು. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು.
ಶ್ರೀ ಸಿದ್ದೇಶ್ವರ ಜಾತ್ರಾ ಕಮಿಟಿಯ ವತಿಯಿಂದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಉತ್ತಮ ಆರೋಗ್ಯ, ದೇಹ ಸದೃಢತೆ ಕುರಿತು ಜಾಗೃತಿ ಮೂಡಿಸುವ ಇಂತಹ ಸ್ಪರ್ಧೆಗಳಿಗೆ ಮತ್ತು ಸ್ಪರ್ಧಾಳು ಪೈಲ್ವಾನರಿಗೆ ಸರಕಾರದ ನೆರವು ಸಿಗುವಂತಾಗಬೇಕು ಎನ್ನುವುದು ಪಾಲ್ಗೊಂಡ ಹಿರಿಯ ಸ್ಪರ್ಧಾಳುಗಳ ಮಾತಾಗಿತ್ತು.
ಇದನ್ನೂ ಓದಿ:ಬೆಂಗಳೂರಿನಲ್ಲಿ 'ಒನ್ ವಲ್ಡ್ ಒನ್ ಫ್ಯಾಮಿಲಿ ಕಪ್': ಯುವಿ, ವೆಂಕಟೇಶ್ ಪ್ರಸಾದ್ ಹೇಳಿದ್ದೇನು?