ಸ್ವಾತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ಹೈದರಾಬಾದ್ನಲ್ಲಿ ವಿಂಟೇಜ್ ಕಾರ್ ಶೋ - ರಾಷ್ಟ್ರೀಯ ಕಾರ್ ರೇಸರ್ ಆಗಿದ್ದ ಪೆಸ್ಟೊಂಜಿ
ಹೈದರಾಬಾದ್(ತೆಲಂಗಾಣ): ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಗರದಲ್ಲಿ ವಿಂಟೇಜ್ ಕಾರುಗಳು ಸದ್ದು ಮಾಡಿದವು. ಅಬಿಡ್ಸ್‌ನಲ್ಲಿರುವ ಚೆರ್ಮಾಸ್ ಗ್ರೂಪ್ಸ್‌ನ ಮಾಲೀಕರಾದ ಕ್ಯಾಪ್ಟನ್ ಕೆ. ಎಫ್ ಪೆಸ್ಟೊಂಜಿ ಅವರು ತಮ್ಮ ವಿಂಟೇಜ್ ಕಾರುಗಳ ಪ್ರದರ್ಶನ ಆಯೋಜಿಸಿದ್ದರು. 1931 ರಿಂದ ಖರೀದಿಸಿದ ಬೆಂಜ್ ಮತ್ತು ರೋಲ್ಸ್ ರಾಯ್ಸ್ ಕಂಪನಿಗಳಿಗೆ ಸೇರಿದ ಕಾರುಗಳು ಮತ್ತು ಬುಲೆಟ್ ಬೈಕ್‌ಗಳನ್ನು ಅಬಿಡ್ಸ್‌ನಲ್ಲಿರುವ ಅವರ ಮನೆ ಮುಂದೆ ಪ್ರದರ್ಶನ ಮಾಡಲಾಯಿತು. ಈ ವಾಹಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಜನರು ಮುಗಿಬಿದ್ದ ದೃಶ್ಯವೂ ಕಂಡುಬಂತು. ರಾಷ್ಟ್ರೀಯ ಕಾರ್ ರೇಸರ್ ಆಗಿದ್ದ ಪೆಸ್ಟೊಂಜಿ ಹವ್ಯಾಸವಾಗಿ ವಿಂಟೇಜ್ ಕಾರುಗಳನ್ನು ಖರೀದಿಸುತ್ತಿದ್ದರು. ಯಾವುದೇ ಹೊಸ ಕಾರು ಮಾರುಕಟ್ಟೆಗೆ ಬಂದಾಗ ಇವರು ಖರೀದಿಸುತ್ತಿದ್ದರು. ಈ ಕಾರುಗಳನ್ನು ಅನೇಕ ಚಿತ್ರಗಳಲ್ಲಿ ಬಳಸಲಾಗಿದೆ ಎಂದು ಅವರು ಹೇಳುತ್ತಾರೆ.
Last Updated : Feb 3, 2023, 8:26 PM IST