ಕರ್ನಾಟಕ

karnataka

ಗ್ರಾಮಸ್ಥರಿಂದ ಪ್ರತಿಭಟನೆ

ETV Bharat / videos

ಶ್ರೀ ಕ್ಷೇತ್ರ ಹಣಗೆರೆ ಅಭಿವೃದ್ದಿಗೆ ಆಗ್ರಹಿಸಿ ಪ್ರತಿಭಟನೆ-ವಿಡಿಯೋ - ಪ್ರತಿಭಟನೆ

By ETV Bharat Karnataka Team

Published : Jan 18, 2024, 10:03 AM IST

ಶಿವಮೊಗ್ಗ: ಶ್ರೀ ಕ್ಷೇತ್ರ ಹಣಗೆರೆಯನ್ನು ಅಭಿವೃದ್ದಿಪಡಿಸಬೇಕು ಎಂದು ಒತ್ತಾಯಿಸಿ ಹಣಗೆರೆ ಹಾಗೂ ಕನ್ನಂಗಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ತೀರ್ಥಹಳ್ಳಿ ತಾಲೂಕಿನ ಹಣಗೆರೆ ದೇಗುಲ ಹಿಂದು-ಮುಸ್ಲಿಮರ ಭಾವೈಕ್ಯತೆಯ ಕೇಂದ್ರವೆಂದೂ ಹೆಸರಾಗಿದೆ.

ಈ ದೇಗುಲಕ್ಕೆ ವರ್ಷವಿಡೀ ಭಕ್ತರು ಆಗಮಿಸುತ್ತಾರೆ. ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ. ಇದರಿಂದಾಗಿ ಹುಂಡಿಯಲ್ಲಿ ಸಾಕಷ್ಟು ಕಾಣಿಕೆ ಹಣ ಸಂಗ್ರಹವಾಗುತ್ತದೆ. ಹೀಗಿದ್ದರೂ ಧಾರ್ಮಿಕ ಕೇಂದ್ರದ ಅಭಿವೃದ್ದಿ ಆಗಿಲ್ಲ. ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಸರಿಯಾದ ವ್ಯವಸ್ಥೆ ಇಲ್ಲ. ದೇವರ ಹೆಸರಿನಲ್ಲಿ ಸಿಬ್ಬಂದಿ ಬೇಕಾಬಿಟ್ಟಿ ರಶೀದಿ ನೀಡುತ್ತಾರೆ.‌ ಇಲ್ಲಿ ದೇವರ ಹೆಸರಿನಲ್ಲಿ ವಸೂಲಿ ನಡೆಯುತ್ತಿದೆ ಎಂಬುದು ಗ್ರಾಮಸ್ಥರ ಆರೋಪ. 

ಕಾಣಿಕೆ ಹುಂಡಿ ಎಣಿಕೆಗೆ ಆಗಮಿಸಿದ್ದ ತೀರ್ಥಹಳ್ಳಿ ತಹಶೀಲ್ದಾರ್, ಧಾರ್ಮಿಕ ದತ್ತಿ‌ ತಹಶೀಲ್ದಾರ್‌ಗೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ, ನಂತರ ಹುಂಡಿ ಹಣ ಪಡೆದುಕೊಂಡು ಹೋಗುವಂತೆ ಗ್ರಾಮಸ್ಥರು  ಆಗ್ರಹಿಸಿದ್ದಾರೆ.

ತಹಶೀಲ್ದಾರ್ ಚಿಕ್ಕೇಗೌಡ ಪ್ರತಿಭಟನಾನಿರತರನ್ನು ಸಮಾಧಾನಪಡಿಸಿ, ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಹಣಗೆರೆ ಗ್ರಾಮ ಪಂಚಾಯತಿ ಸದಸ್ಯರೂ ಭಾಗವಹಿಸಿದ್ದರು.

ಇದನ್ನೂ ಓದಿ:ಜ.25ರಿಂದ ಶಿವರಾಮ್ ಕಾರಂತ ಬಡಾವಣೆ ನಿವೇಶನಗಳಿಗೆ ಅರ್ಜಿ ಆಹ್ವಾನ

ABOUT THE AUTHOR

...view details