ಗ್ರಾಮಸ್ಥರನ್ನು ಅಟ್ಟಿಸಿಕೊಂಡು ಬಂದ ಕಾಡಾನೆ ಹಿಂಡು..! ಯಾಕೆ ಗೊತ್ತಾ? ವಿಡಿಯೋ ನೋಡಿ - ಜಮೀನಿನಲ್ಲಿ ಹಲವಾರು ಕಾಡಾನೆಗಳು
ಗೋಲ್ಪಾರಾ (ಅಸ್ಸೋಂ):ಅಸ್ಸೋಂನ ವಿವಿಧ ಭಾಗಗಳಲ್ಲಿ ಮನುಷ್ಯ- ಕಾಡಾನೆಗಳ ನಡುವಿನ ಸಂಘರ್ಷ ಮುಂದುವರಿದಿದ್ದು, ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗುರುವಾರ ಅಸ್ಸೋಂ ಗೋಲ್ಪಾರಾದ ಹರಿಮುರ ದೈಕತ ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿ ಹಲವಾರು ಕಾಡಾನೆಗಳು ಕಾಣಿಸಿಕೊಂಡಿವೆ. ಗದ್ದೆಯಲ್ಲಿ ಆನೆಗಳನ್ನು ಕಂಡ ಗ್ರಾಮಸ್ಥರು ಬೆಂಕಿ ಹಚ್ಚಿ ಕಾಡಾನೆಗಳ ಹಿಂಡನ್ನು ಓಡಿಸಲು ಯತ್ನಿಸಿದ್ದಾರೆ. ಆದರೆ, ಬೆಂಕಿಯನ್ನು ಕಂಡ ಆನೆಗಳು ಮತ್ತೆ ಕಾಡಿಗೆ ಓಡದೆ, ಕ್ಷಣಾರ್ಧದಲ್ಲಿ ಕಾಡಾನೆಗಳ ಹಿಂಡು ಗ್ರಾಮಸ್ಥರತ್ತ ಓಡಿ ಬಂದಿದೆ.
ಆನೆಗಳು ತಮ್ಮತ್ತ ಓಡಿ ಬರುತ್ತಿರುವುದನ್ನು ಕಂಡು ಬೆಂಕಿ ಹಚ್ಚುತ್ತಿದ್ದ ಹುಡುಗರು ಸೇರಿದ್ದ ಅಲ್ಲಿದ್ದ ಗ್ರಾಮಸ್ಥರು ಓಡಲು ಶುರು ಮಾಡಿದ್ದಾರೆ. ಜನರು ಅಲ್ಲಿಂದ ಓಡಿ ಹೋಗುತ್ತಿರುವುದು ಕಂಡು ಆನೆಗಳು ಕೂಡ ಅವರ ಬೆನ್ನ ಹಿಂದೆಯೇ ಅಟ್ಟಿಸಿಕೊಂಡು ಬಂದಿದೆ. ಈ ಎಲ್ಲ ದೃಶ್ಯಗಳು ಇವೆಲ್ಲವನ್ನೂ ನೋಡಿಕೊಂಡು ನಿಂತಿದ್ದ ಗ್ರಾಮಸ್ಥರೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗೋಲ್ಪಾರಾದ 30 ಸೆಕೆಂಡ್‌ಗಳ ಮಾನವ ಕಾಡಾನೆಗಳ ನಡುವಿನ ಸಂಘರ್ಷದ ವಿಡಿಯೋ ಎಲ್ಲರಲ್ಲೂ ಆತಂಕ ಮೂಡಿಸಿದೆ. ತಮ್ಮ ಹೊಲಗಳಲ್ಲಿರುವ ಬೆಳೆಗಳಿಗೆ ಹಾನಿಯಾಗುವ ಮುನ್ನ, ಆದಷ್ಟು ಬೇಗ ಆನೆಗಳ ಹಿಂಡನ್ನು ಓಡಿಸುವಂತೆ ಸ್ಥಳೀಯರು ಇಲಾಖಾ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ನೋಡಿ:Heavy flood: ಭಾರಿ ಮಳೆ ಹಿನ್ನೆಲೆ ಕಾಜಿಪೇಟೆ ರೈಲು ನಿಲ್ದಾಣ ಜಲಾವೃತ..