ವಾಹನ ಪಲ್ಟಿಯಾಗಿ 800 ಕೋಳಿಗಳು ಸಾವು... ಸಿಕ್ಕ ಸಿಕ್ಕ ಕೋಳಿ ತೆಗೆದುಕೊಂಡು ಹೋದ ಜನ!
Published : Oct 14, 2022, 5:06 PM IST
Published : Oct 14, 2022, 5:06 PM IST
|Updated : Feb 3, 2023, 8:29 PM IST
ಮೇದಕ್: ಕೋಳಿಗಳನ್ನು ಸಾಗಿಸುತ್ತಿದ್ದ ವ್ಯಾನ್ವೊಂದಯ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜಿಲ್ಲೆಯ ರಾಮಯಂಪೇಟ ಮಂಡಲದ ಲಕ್ಷ್ಮಾಪುರದಲ್ಲಿ ನಡೆದಿದೆ. ಲಕ್ಷ್ಮಾಪುರದಿಂದ ಸಿದ್ದಿಪೇಟೆಗೆ 1200 ಕೋಳಿಗಳನ್ನು ಸಾಗಿಸುತ್ತಿದ್ದ ಈ ವಾಹನ ಇಲ್ಲಿಯ ಉಪ ಠಾಣೆಯ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಿಂದ ಕೋಳಿಗಳು ಚೆಲ್ಲಾಪಿಲ್ಲಿಯಾಗಿದ್ದವು. ವಿಷಯ ತಿಳಿದ ಸುತ್ತಮುತ್ತಲಿನ ಜನರು ಸಿಕ್ಕ ಸಿಕ್ಕ ಕೋಳಿಗಳನ್ನು ಹಿಡಿಕೊಂಡು ಮನೆಗೆ ಹೋದರು. ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ವ್ಯಾನ್ ಚಾಲಕ, ಸುಮಾರು 800 ಕೋಳಿಗಳು ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ.
Last Updated : Feb 3, 2023, 8:29 PM IST