ಬೀದರ್: ಗುರುದ್ವಾರಕ್ಕೆ ಚುನಾವಣಾ ಚಾಣಕ್ಯ ಅಮಿತ್ ಶಾ ಭೇಟಿ- ವಿಡಿಯೋ
ಬೀದರ್ : ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೇಂದ್ರ ಸರ್ಕಾರ ರಣತಂತ್ರ ಹೂಡಿದೆ. ಹಾಗಾಗಿ, ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಸೇರಿದಂತೆ ಕೇಂದ್ರ ನಾಯಕರು ರಾಜ್ಯಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ. ಇಂದಿನಿಂದ ರಾಜ್ಯ ಪ್ರವಾಸ ಪ್ರಾರಂಭಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುದ್ವಾರಕ್ಕೆ ಭೇಟಿ ನೀಡಿದರು.
ಇದನ್ನೂ ಓದಿ: 'ವಿರೋಧಿಗಳು ಮರ್ ಜಾ ಮೋದಿ ಅಂದ್ರೆ, ಜನತೆ ಮತ್ ಜಾ ಮೋದಿ ಅಂತಿದ್ದಾರೆ'
ಮೊದಲು, ಕಾರಿನಲ್ಲಿ ಬಂದಿಳಿದ ಗೃಹ ಸಚಿವ ಅಮಿತ್ ಶಾ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಬರುವವರೆಗೂ ಕಾದು ನಿಂತರು. ನಂತರ ಗೃಹ ಸಚಿವರಿಗೆ ಗುಲಾಬಿ ಹೂ ನೀಡಿ, ಕೇಸರಿ ಶಾಲು ಮತ್ತು ತಲೆಗೆ ಪಗಡಿ ತೊಡಿಸುವ ಮೂಲಕ ಗುರುದ್ವಾರದ ಸಿಬ್ಬಂದಿ ಸ್ವಾಗತಿಸಿದರು. ಬಳಿಕ ಒಂದೇ ವಾಹನದಲ್ಲಿ ಕುಳಿತು ಅಮಿತ್ ಶಾ ಮತ್ತು ಬಿಎಸ್ವೈ ಗುರುದ್ವಾರ ವೀಕ್ಷಣೆಗೆ ತೆರಳಿದರು. ಇನ್ನೊಂದು ವಾಹನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೋದರು.
ಇದನ್ನೂ ಓದಿ:ಮಂಡ್ಯದಲ್ಲೂ ಬದಲಾವಣೆ, ಕರ್ನಾಟಕದಲ್ಲಿ ಬಿಜೆಪಿ ಗೆಲ್ಲೋದು ಖಚಿತ: ಅಮಿತ್ ಶಾ ವಿಶ್ವಾಸ
ಗುರುದ್ವಾರ ಭೇಟಿ ಬಳಿಕ ಐತಿಹಾಸಿಕ ನರಸಿಂಹ ಝರ್ನಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ ಬಸವ ಕಲ್ಯಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿನ ಅನುಭವ ಮಂಟಪಕ್ಕೆ ತೆರಳಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: ಚುನಾವಣೆ ಫಲಿತಾಂಶದಿಂದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಮತ್ತಷ್ಟು ದೃಢ: ಮೋದಿಯಿಂದ ಮತದಾರರಿಗೆ ಅಭಿನಂದನೆ