ಕರ್ನಾಟಕ

karnataka

ದೇವನಹಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ

ETV Bharat / videos

ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಕ್ಯಾಂಟರ್​ಗೆ ಬೈಕ್​ ಡಿಕ್ಕಿ: ಯುವಕ, ಯುವತಿ ಸಾವು - ರಸ್ತೆಯಲ್ಲೇ ಕೆಟ್ಟು ನಿಂತಿದ್ದ ಕ್ಯಾಂಟರ್

By

Published : Feb 10, 2023, 7:08 PM IST

Updated : Feb 14, 2023, 11:34 AM IST

ದೇವನಹಳ್ಳಿ: ಹೆದ್ದಾರಿಯಲ್ಲಿ ಕೆಟ್ಟು‌ ನಿಂತಿದ್ದ ಕ್ಯಾಂಟರ್​ಗೆ ಹಿಂಬದಿಯಿಂದ ಬಂದು ರಾಯಲ್‌ ಎನ್‌ಫೀಲ್ಡ್​ ಬೈಕ್​ ಡಿಕ್ಕಿ ಹೊಡೆದು ಯುವಕ, ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7 ರ ಆವತಿ ಬಳಿ ಇಂದು ಘಟನೆ ನಡೆಯಿತು. ಮೃತ ಯುವಕನನ್ನು ಬೆಂಗಳೂರು ಮೂಲದ ಭರತ್ ಎಂದು ಗುರುತಿಸಲಾಗಿದೆ. ಯುವತಿಯ ಹೆಸರು, ವಿಳಾಸ ಪತ್ತೆಯಾಗಿಲ್ಲ. 

ಚಿಕ್ಕಬಳ್ಳಾಪುರ ಕಡೆಯಿಂದ ವೇಗವಾಗಿ ಬರುತ್ತಿದ್ದ ಬೈಕ್‌​  ರಸ್ತೆಯಲ್ಲೇ ನಿಂತಿದ್ದ ಕ್ಯಾಂಟರ್​ಗೆ ಗುದ್ದಿದೆ. ರಭಸಕ್ಕೆ ರಸ್ತೆಗೆ ಬಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. 

ಇದನ್ನೂ ಓದಿ:ಮಂಡ್ಯ: ಬೈಕ್ ಮೇಲೆ ಮರ ಬಿದ್ದು ಪೌರಕಾರ್ಮಿಕ ಸಾವು

Last Updated : Feb 14, 2023, 11:34 AM IST

ABOUT THE AUTHOR

...view details