ಕರ್ನಾಟಕ

karnataka

ಮಹಿಳೆಯರ ನೂಕುನುಗ್ಗಲಿಗೆ ಕಿತ್ತು ಬಂದಿರುವ ಬಸ್​ನ ಬಾಗಿಲು

ETV Bharat / videos

ಪ್ರತ್ಯೇಕ ಘಟನೆ: ನೂಕುನುಗ್ಗಲಿಗೆ ಕಿತ್ತು ಬಂತು ಸರ್ಕಾರಿ ಬಸ್​ ಡೋರ್​.. ಕಾಡಿನ ಮಧ್ಯದಲ್ಲಿ ಮಹಿಳೆಯರನ್ನು ಇಳಿಸಿದ ಬಸ್​ ಕಂಡಕ್ಟರ್​ - ಮಹಿಳೆಯರ ನೂಕುನುಗ್ಗಲಿಗೆ ಕಿತ್ತು ಬಂದಿರುವ ಬಸ್​ನ ಬಾಗಿಲು

By

Published : Jun 17, 2023, 11:10 PM IST

ಚಾಮರಾಜನಗರ:ಟಿಕೆಟ್ ನೀಡುವ ಯಂತ್ರ ಕೈ ಕೊಟ್ಟಿದ್ದಕ್ಕೆ ಕಾಡಿನ ಮಧ್ಯೆ ಮಹಿಳೆಯರು, ವಿದ್ಯಾರ್ಥಿನಿಯರನ್ನು ಕೆಎಸ್​ಆರ್​ಟಿಸಿ ಬಸ್​ನ ನಿರ್ವಾಹಕ ಕೆಳಗಿಳಿಸಿ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಸಮೀಪ ನಡೆದಿದೆ. ಮಹಿಳೆಯರಿಗೆ ಉಚಿತ ಟಿಕೆಟ್ ಇದೆ. ಟಿಕೆಟ್ ಯಂತ್ರ ಕೈ ಕೊಟ್ಟಿದೆ ಎಂದು ಕೊಳ್ಳೇಗಾಲದಿಂದ ಹನೂರು ರಾಮಾಪುರ ಮಾರ್ಗದಿಂದ ಹೂಗ್ಯಂ ಕಡೆ ತೆರಳುತಿದ್ದ ಬಸ್ಸನ್ನು ಕಾಡಿನ ಮಧ್ಯೆ ನಿಲ್ಲಿಸಿ ಐದರಿಂದ ಆರು ಮಹಿಳಾ ಪ್ರಯಾಣಿಕರನ್ನು ಕಾಡಿನ ಮದ್ಯೆ ಅರಣ್ಯ ವಲಯದಲ್ಲಿ ಕೆಳಗಿಳಿಸಿ ನಂತರ ಹನೂರು ಸರ್ಕಾರಿ ಬಸ್ ನಿಲ್ದಾಣಕ್ಕೆ ಚಾಲಕ ಹಿಂದಿರುಗಿದ್ದಾನೆ. ಕೊಳ್ಳೇಗಾಲ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಅನ್ಯ ಮಾರ್ಗವಿಲ್ಲದೇ ಮಹಿಳೆಯರು ಕಿ.ಮೀ ಗಟ್ಟಲೇ ನಡೆದೆಕೊಂಡು ತಮ್ಮ ತಮ್ಮ ಊರು ಸೇರಿದ್ದಾರೆ. ಬೇಜವಾಬ್ದಾರಿ ತೋರಿರುವ ನಿರ್ವಾಹಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಹಿಳೆಯರು ಒತ್ತಾಯಿಸಿದರು.

ಮಹಿಳೆಯರ ನೂಕುನುಗ್ಗಲಿಗೆ ಕಿತ್ತು ಬಂದಿರುವ ಬಸ್​ನ ಬಾಗಿಲು:ಶಕ್ತಿ ಯೋಜನೆ ಪರಿಣಾಮ ಸರ್ಕಾರಿ ಬಸ್ಸುಗಳಲ್ಲಿ ಜನರು ತುಂಬಿ ತುಳುಕುತ್ತಿದ್ದು, ಸಾರಿಗೆ ಸಂಸ್ಥೆ ಬಸ್ಸಿನ ಬಾಗಿಲೇ ಕಿತ್ತುಬಂದಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಕೊಳ್ಳೇಗಾಲ ಬಸ್ ನಿಲ್ದಾಣದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ‌ ಮಣ್ಣೆತ್ತಿನ ಅಮಾವಾಸ್ಯೆ ಸೇವೆಗೆ ತೆರಳಲು ಮಹಿಳೆಯರು ನಾ‌ ಮುಂದು, ತಾ ಮುಂದು ಎಂದು ಬಸ್​ ಏರಿದ್ದರಿಂದ, ನೂಕು ನುಗ್ಗಲು ಉಂಟಾಗಿ ಬಸ್​ ಡೋರ್ ಕಿತ್ತುಬಂದಿದೆ. ಪರಿಣಾಮ ನಿರ್ವಾಹಕ ಪೇಚಾಟಕ್ಕೆ ಸಿಲುಕಿದ್ದಾನೆ. ಸದ್ಯ ಈ ಎರಡು ಚಿತ್ರ ಸಾಮಾಜಿಕ ಜಾಲತಾಣದಲ್ಲೂ ಹೆಚ್ಚು ಹರಿದಾಡಲು ಆರಂಭಿಸಿದ್ದು, ''ವುಮೆನ್ ಪವರ್'' ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:ಛತ್ತೀಸಗಢ ಅಕ್ಕಿ ಮೂಲಕ ಕಾಂಗ್ರೆಸ್ ಸರ್ಕಾರ ತನ್ನ ಜೇಬಿಗೆ ಹಣ ಹಾಕಿಕೊಳ್ಳುತ್ತಿದೆ: ಎನ್. ರವಿಕುಮಾರ್

ABOUT THE AUTHOR

...view details