ಕರ್ನಾಟಕ

karnataka

ತಾಂಜೇನಿಯಾದ ಅಧ್ಯಕ್ಷೆ ಸಮಿಯಾ ಸುಲುಹು

ETV Bharat / videos

ಭಾರತೀಯ ಕಲಾವಿದರು ನುಡಿಸಿದ ಸಂಗೀತಕ್ಕೆ ಮನಸೋತ ತಾಂಜೇನಿಯಾ ಅಧ್ಯಕ್ಷೆ: ವಿಡಿಯೋ - ತಾಂಜೇನಿಯಾದ ಅಧ್ಯಕ್ಷೆ ಭಾರತ ಭೇಟಿ

By ETV Bharat Karnataka Team

Published : Oct 9, 2023, 6:24 PM IST

ನವದೆಹಲಿ:ಭಾರತ ಪ್ರವಾಸ ಕೈಗೊಂಡಿರುವ ತಾಂಜೇನಿಯಾದ ಅಧ್ಯಕ್ಷೆ ಸಮಿಯಾ ಸುಲುಹು ಹಸನ್​ ಮತ್ತು ಅಧಿಕಾರಿಗಳ ನಿಯೋಗ ದೆಹಲಿಯ ಹೈದರಾಬಾದ್​ ನಿವಾಸದಲ್ಲಿ ತಾಂಜೇನಿಯಾ ಸಂಗೀತವನ್ನು ಆನಂದಿಸಿ ಕುಣಿದು ಸಂಭ್ರಮಿಸಿದರು. ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಡಾ.ಜೈಶಂಕರ್​ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭೋಜನಕೂಟದ ವೇಳೆ ಭಾರತದ ಕಲಾವಿದರು ತಾಂಜೇನಿಯಾ ಸಂಗೀತ ನುಡಿಸಿದರು. ಇದಕ್ಕೆ ಮನಸೋತ ಅಧ್ಯಕ್ಷೆ ಸಮಿಯಾ ಮತ್ತು ಅಧಿಕಾರಿಗಳು ನೃತ್ಯ ಮಾಡುತ್ತಾ ಸಂಗೀತವನ್ನು ಆಸ್ವಾದಿಸಿದರು.

ಇದಕ್ಕೂ ಮುನ್ನ ಸಾಮಿಯಾ ಸುಲುಹು ಅವರು ಇಲ್ಲಿನ ರಾಜ್‌ಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಭಾನುವಾರ ದೆಹಲಿಗೆ ಬಂದಿಳಿದ ಸುಲುಹು ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿ, ಆತ್ಮೀಯವಾಗಿ ಬರಮಾಡಿಕೊಂಡಿದ್ದರು.

ಈ ವೇಳೆ ಮಾತನಾಡಿದ್ದ ತಾಂಜೇನಿಯಾ ಅಧ್ಯಕ್ಷೆ, "ಭಾರತ ಮತ್ತು ತಾಂಜೇನಿಯಾ ನಡುವೆ ದಶಕಗಳಿಂದ ಉತ್ತಮ ಸಂಬಂಧ ಮುಂದುವರಿದಿದೆ. ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರ ಅಭಿವೃದ್ಧಿಗೆ ಪೂರಕವಾದ ಚರ್ಚೆ ನಡೆಸಲಿದ್ದೇವೆ. ನಮ್ಮ ಹಿಂದಿನವರು ಸ್ಥಾಪಿಸಿದ ದ್ವಿಪಕ್ಷೀಯ ಸಂಬಂಧ ಮುಂದಿನ ಹಲವು ದಶಕಗಳವರೆಗೆ ಮುಂದುವರಿಯಲಿದೆ" ಎಂದರು.

ಇದನ್ನೂ ಓದಿ:ಕಾವೇರಿ ನೀರಿಗಾಗಿ ಕೇಂದ್ರದ ಮೇಲೆ ಒತ್ತಡ: ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ABOUT THE AUTHOR

...view details