ಕರ್ನಾಟಕ

karnataka

ಪೊಲೀಸ್ ಸರ್ಪಗಾವಲಿನ ಮಧ್ಯೆ ದೇವಸ್ಥಾನ ಪ್ರವೇಶಿಸಿದ ದಲಿತರು

ETV Bharat / videos

50 ವರ್ಷಗಳ ಬಳಿಕ ಪೊಲೀಸ್ ಸರ್ಪಗಾವಲಿನ ಮಧ್ಯೆ ದೇವಸ್ಥಾನ ಪ್ರವೇಶಿಸಿದ ದಲಿತರು! - ಚೆಲ್ಲಂಕುಪ್ಪಂ ಮಾರಿಯಮ್ಮನ್ ದೇವಸ್ಥಾನ

By

Published : Aug 5, 2023, 8:48 AM IST

ತಮಿಳುನಾಡು:ಪರಿಶಿಷ್ಟ ಜಾತಿ (ಎಸ್​ಸಿ) ಸಮುದಾಯದ ಸುಮಾರು 250 ಸದಸ್ಯರು, 50ಕ್ಕೂ ಹೆಚ್ಚು ಪೊಲೀಸರ ಬೆಂಗಾವಲಿನಲ್ಲಿ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಲ್ಲಂಕುಪ್ಪಂ ಮಾರಿಯಮ್ಮನ್ ದೇವಸ್ಥಾನವನ್ನ ಮೆರವಣಿಗೆ ಮೂಲಕ ಪ್ರವೇಶಿಸಿ, ಹರ್ಷ ವ್ಯಕ್ತಪಡಿಸಿದರು.

ಈ ದೇವಾಲಯ ಸುಮಾರು 100 ವರ್ಷಗಳಷ್ಟು ಹಳೆಯದಾಗಿದೆ. ಕೆಲವು ಕಾರಣಗಳಿಗಾಗಿ ಪರಿಶಿಷ್ಟ ಜಾತಿಯ ಸದಸ್ಯರನ್ನು ದೇವಾಲಯಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದ್ದರು. 50 ವರ್ಷಗಳ ಹೋರಾಟದ ನಂತರ ದಲಿತರು ಪೊಲೀಸ್ ರಕ್ಷಣೆಯಲ್ಲಿ ದೇವಸ್ಥಾನ ಪ್ರವೇಶಿಸಿದರು. ದೇವಸ್ಥಾನದ ಆವರಣದಲ್ಲಿ ಪೊಂಗಲ್ ಆಚರಿಸಿ ಸಂಭ್ರಮಿಸಿದರು.

ನವವಿವಾಹಿತರು ಈ ದೇವಾಲಯದಲ್ಲಿ ಪ್ರಾರ್ಥನೆ ಮಾಡಿ, ಪೊಂಗಲ್  ಅರ್ಪಿಸಿದರೆ ಅವರ ಬಯಕೆ ಈಡೇರುತ್ತವೆ ಎಂಬ ನಂಬಿಕೆಯಿದೆ. ಈ ಮೊದಲು ನಮಗೆ ಅವಕಾಶ ನಿರಾಕರಿಸಲಾಗಿತ್ತು. ಆದರೆ, ಈಗ ದೇವಸ್ಥಾನ ಪ್ರವೇಶಿಸಲು, ಪ್ರಾರ್ಥನೆ ಸಲ್ಲಿಸಲು, ಪೊಂಗಲ್ ರೆಡಿ ಮಾಡಲು  ಮತ್ತು ನಮ್ಮ ಪ್ರತಿಜ್ಞೆಗಳನ್ನು ಪೂರೈಸಲು ಜಿಲ್ಲೆಯ ಅಧಿಕಾರಿಗಳು ನಮಗೆ ಸಹಾಯ ಮಾಡಿದ್ದಾರೆ. ಇದರಿಂದ ನಮಗೆ ಸಂತಸವಾಗಿದೆ ಎಂದು ದಲಿತ ಮಹಿಳೆಯೊಬ್ಬರು ಹೇಳಿದರು. ಈ ದೇವಸ್ಥಾನಕ್ಕೆ ಪ್ರವೇಶ ನಿರ್ಬಂಧ ಹಿನ್ನೆಲೆ ಈವರೆಗೆ ದಲಿತರು 30 ವರ್ಷಗಳ ಹಿಂದೆ ಗ್ರಾಮದಲ್ಲಿ ನಿರ್ಮಿಸಿದ ಕಾಳಿಯಮ್ಮಳ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದರು.

ಇದನ್ನೂ ಓದಿ:ಅಮಲಿಹಾಳ: ಪೊಲೀಸ್ ಸರ್ಪಗಾವಲಿನ ಮಧ್ಯೆ ದಲಿತರಿಗೆ ದೇವಸ್ಥಾನ ಪ್ರವೇಶ

ABOUT THE AUTHOR

...view details