ಕರ್ನಾಟಕ

karnataka

Special Puja for rain in Vijayanagara

ETV Bharat / videos

ಪೂರ್ವ ಮುಂಗಾರು ಮಂಕು: ಹೊಸಪೇಟೆಯಲ್ಲಿ ಊರಮ್ಮ ದೇವಿಗೆ ವಿಶೇಷ ಪ್ರಾರ್ಥನೆ - Special Puja for rain in Vijayanagara

By

Published : Jun 7, 2023, 4:06 PM IST

ವಿಜಯನಗರ:ಉತ್ತಮ ಮಳೆ, ಬೆಳೆಗಾಗಿ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ಆರಾಧ್ಯದೈವ ಊರಮ್ಮ ದೇವಿಗೆ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ಯದಲ್ಲಿ ಪೂರ್ವ ಮುಂಗಾರು ಕೆಲಕಡೆ ಉತ್ತಮವಾಗಿದ್ದರೆ ಇನ್ನೂ ಕೆಲವು ಕಡೆಗಳಲ್ಲಿ ಹೇಳಿಕೊಳ್ಳುವಷ್ಟು ಆಗಿಲ್ಲ. ಕೆಲವು ವರ್ಷಗಳಿಂದ ಈ ವೇಳೆಗೆ ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ನೀರು ಭರ್ತಿಯಾಗುತ್ತಿತ್ತು. 

ಆದರೆ, ಈ ಬಾರಿ ಕೇವಲ 5 ಟಿಎಂಸಿ ನೀರು ಇದೆ. ಆದ್ದರಿಂದ ಊರಮ್ಮ ದೇವಿಯ ಮೊರೆಹೋದ ಜನರು ಉತ್ತಮ ಮಳೆ ಬಂದು ಕೆರೆ-ಕುಂಟೆ ತುಂಬಲಿ, ರೈತರ ಬದುಕು ಹಸನಾಗಲಿ. ಈ ಭಾಗದ‌ ಜೀವನಾಡಿ ತುಂಗಭದ್ರಾ ಜಲಾಶಯ ಸಕಾಲಕ್ಕೆ ಭರ್ತಿಯಾಗಲಿ ಎಂದು ದೇವತೆಗೆ ಹೂ, ಹಣ್ಣು, ಕಾಯಿ ನೀಡಿ ಹರಕೆ ತೀರಿಸಿದರು.

ಮಳೆಗಾಗಿ ಕಮಲಾಪುರದ ಜನರು ಮಾತ್ರವಲ್ಲದೇ ಹೊಸಪೇಟೆ ತಾಲೂಕಿನ ಹಂಪಿ, ಕೆರೆತಾಂಡಾ, ವೆಂಕಟಪುರ, ಬುಕ್ಕಸಾಗರ, ಸೀತಾರಾಮ ತಾಂಡಾ, ಪಾಪಿನಾಯಕನಹಳ್ಳಿ, ಮಲಪನಗುಡಿ, ಗಾಪಲೆಯಮ್ಮನಗುಡಿ, ಕಡ್ಡಿರಾಂಪುರ ಸೇರಿ ತಾಲೂಕಿನ ನಾನಾ ಪ್ರದೇಶಗಳ ಜನರು ಪ್ರಾರ್ಥಿಸಿದರು. ಇನ್ನೊಂದೆಡೆ, ಹಂಪಿ ವಿರೂಪಾಕ್ಷೇಶ್ವರ, ಉದ್ದನ ವೀರಭದ್ರೇಶ್ವರ, ಮಾಲ್ಯವಂತ, ಬುಕ್ಕಸಾಗರದ ನಾಗಪ್ಪನ ದೇಗುಲಕ್ಕೂ ತೆರಳಿದ ಜನರು ವರ್ಷಧಾರೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ:ವಿದ್ಯುತ್ ಬಿಲ್ ಕಟ್ಟಲು ಗ್ರಾಮಸ್ಥರ ಹಿಂದೇಟು: ಬಿಲ್ ಕಲೆಕ್ಟರ್ ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ

ABOUT THE AUTHOR

...view details