ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ: ವಿಡಿಯೋ - ಚಾಮುಂಡೇಶ್ವರಿ ದೇವಿಯ ದರ್ಶನ
ಮೈಸೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸೋಮವಾರ ರಾತ್ರಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ದರ್ಶನದ ಬಳಿಕ ಕೇಂದ್ರ ಸಚಿವೆ ಗರ್ಭ ಗುಡಿಯ ಮುಂಭಾಗದಲ್ಲಿ ಕುಳಿತು ಸ್ವಲ್ಪ ಹೊತ್ತು ತಾಯಿಗೆ ನಮಸ್ಕರಿಸಿದರು. ಚಾಮುಂಡೇಶ್ವರಿ ತಾಯಿಯ ಪರಮ ಭಕ್ತರಾದ ಶೋಭಾ ಕರಂದ್ಲಾಜೆ ಮೈಸೂರಿಗೆ ಆಗಮಿಸಿದಾಗಲೆಲ್ಲ ತಪ್ಪದೇ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುತ್ತಾರೆ.
ಇದನ್ನೂ ಓದಿ:ಚುನಾವಣೆಯಲ್ಲಿ ಸೋಲು: ಬಿಜೆಪಿ ನಾಯಕರು ಹೇಳಿದ್ದೇನು?- ವಿಡಿಯೋ
ಈ ಬಾರಿ ರಾಜ್ಯದಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಸ್ಥಾನ ದೊರೆಯಲಿಲ್ಲ. ಜತೆಗೆ ಬಿಜೆಪಿ ಹಳೆ ಮೈಸೂರು ಭಾಗದಲ್ಲಿ ಕೂಡ ಹೆಚ್ಚಿನ ಸ್ಥಾನ ಗಳಿಸಲಿಲ್ಲ. ಈ ಮಧ್ಯೆ ಸಚಿವೆ ದೇವರ ದರ್ಶನ ಪಡೆದದ್ದು ವಿಶೇಷ. ಇವರಿಗೆ ಮೈಸೂರಿನ ಕೃಷ್ಣ ರಾಜ ಕ್ಷೇತ್ರದ ನೂತನ ಶಾಸಕ ಶ್ರೀವತ್ಸ ಸಾಥ್ ಅವರು ನೀಡಿದರು.
ಇದನ್ನೂ ಓದಿ: ಸುಳ್ಳು ಆರೋಪ ಮಾಡಿದ ಕಾಂಗ್ರೆಸ್ ಪಕ್ಷ ಕ್ಷಮೆ ಕೇಳಬೇಕು : ಶೋಭಾ ಕರಂದ್ಲಾಜೆ ಆಗ್ರಹ