ಕರ್ನಾಟಕ

karnataka

ಅಗ್ನಿಶಾಮಕ ದಳದ ಕಚೇರಿಯಲ್ಲಿ ಮುಳ್ಳುಹಂದಿ ಪ್ರತ್ಯಕ್ಷ

ETV Bharat / videos

ಪಾಂಡೇಶ್ವರ ಅಗ್ನಿಶಾಮಕ ದಳದ ಕಚೇರಿ ಬಳಿ ಮುಳ್ಳುಹಂದಿ ಪ್ರತ್ಯಕ್ಷ

By ETV Bharat Karnataka Team

Published : Dec 29, 2023, 2:25 PM IST

ಮಂಗಳೂರು : ನಗರದ ಪಾಂಡೇಶ್ವರ ಅಗ್ನಿಶಾಮಕ ದಳದ ಆವರಣದಲ್ಲಿ ಗುರುವಾರ ಬೆಳಗ್ಗೆ ಮುಳ್ಳುಹಂದಿಯೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತು. ಬಳಿಕ, ಅದನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಲಾಯಿತು.

ಇಂದು ಬೆಳಗ್ಗೆ 8.30ರ ಸುಮಾರಿಗೆ ಪಾಂಡೇಶ್ವರ ಅಗ್ನಿಶಾಮಕ ದಳದ ಆವರಣದಲ್ಲಿ ಮುಳ್ಳುಹಂದಿ ಓಡಾಡುತ್ತಿತ್ತು. ಇದನ್ನು ಗಮನಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೃಷ್ಣ ಹಂಡಾ ಎಂಬುವರು ಶ್ವಾನ ರಕ್ಷಣೆ ಮಾಡುವ ಬಲೆಯ ಮೂಲಕ ಮುಳ್ಳುಹಂದಿಯನ್ನು ಹಿಡಿದಿದ್ದಾರೆ. ಬಳಿಕ ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. 

ಇದನ್ನೂ ಓದಿ :ಪ್ರತ್ಯೇಕ ಘಟನೆ: ಅಪರಿಚಿತ ಮೃತದೇಹಕ್ಕೆ ಹೆಗಲುಕೊಟ್ಟ ಅಂಕೋಲಾ ಪಿಎಸ್ಐ.. ಮುಳ್ಳುಹಂದಿ ಬೇಟೆಯಾಡಿದ ಇಬ್ಬರ ಬಂಧನ

ಪ್ರತ್ಯೇಕ ಘಟನೆಯೊಂದರಲ್ಲಿ, ಕಳೆದ ಆಗಸ್ಟ್​ ತಿಂಗಳಲ್ಲಿ ಮುಳ್ಳು ಹಂದಿ ಬೇಟೆಯಾಡಿ ಬೈಕ್‌ನಲ್ಲಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕುಮಟಾ ತಾಲೂಕಿನ ಆನೆಗುಂದಿ ಬಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದರು. ತಾಲೂಕಿನ ದೀವಳ್ಳಿ ಗ್ರಾಮದ ಸಂಜಯ ದಿನ್ನಿ ನೊರೊನಾ ಹಾಗೂ ಪ್ರಕಾಶ ಫ್ರಾನ್ಸಿಸ್ ರೊಡ್ರಗಿಸ್ ಬಂಧಿತ ಆರೋಪಿಗಳು. ಬೈಕ್‌ ಹಾಗೂ ಮುಳ್ಳುಹಂದಿ ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿತರ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 

ABOUT THE AUTHOR

...view details