ರಾಜ್ಯದ ಗಡಿ ಭಾಗದಿಂದ ಅಯೋಧ್ಯೆಗೆ ಹೊರಟ ಕಂಬಳಿ - ಅಯೋಧ್ಯೆ ರಾಮ ಮಂದಿರ ಉದ್ಘಾಟನೆ
Published : Jan 16, 2024, 8:10 PM IST
ಶಿವಮೊಗ್ಗ: ಜನವರಿ 22 ರಂದು ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರದ ಲೋಕಾರ್ಪಣೆ ಆಗಲಿದೆ. ಈಗಾಗಲೇ ಮೂರ್ತಿ ಪ್ರತಿಷ್ಠಾಪನೆಗೆ ಮಂದಿರ ಸಜ್ಜಾಗಿದೆ. ಉದ್ಘಾಟನೆ ದಿನದಂದು ಪೂಜೆ ವೇಳೆ ಹಾಸಲು ಕೋಟೆ ನಾಡು ಚಿತ್ರದುರ್ಗದಿಂದ ಕುರಿಗಳ ಉಣ್ಣೆಯಿಂದ ಕಪ್ಪು ಕಂಬಳಿಯನ್ನು ಸಿದ್ದ ಪಡಿಸಲಾಗಿದೆ. ಚಳ್ಳಕೆರೆ ತಾಲೂಕಿನ ಪಡಸಲುಬಂಡೆ ಗ್ರಾಮದವರು ಮನೆಗಳಲ್ಲಿ ಸಾಕಿದ ಕುರಿಗಳಿಂದ ಉಣ್ಣೆಯನ್ನು ತೆಗೆದು ತಾವೇ ಕಂಬಳಿ ನೇಯ್ದಿದ್ದಾರೆ.
ಯಾವುದೇ ಪೂಜೆ ನಡೆಸುವಾಗ ಕಂಬಳಿ ಹಾಸಿ ಪೂಜೆ ನಡೆಸುವುದು ವಾಡಿಕೆ. ಭಾರತೀಯ ಸಂಸ್ಕೃತಿಯಲ್ಲಿ ಕಂಬಳಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಇದರಿಂದ ಪಡುಸಲುಬಂಡೆ ಗ್ರಾಮದವರು ತಾವೇ ಅತ್ಯಂತ ಶ್ರದ್ದಾ ಭಕ್ತಿಯಿಂದ ಕಂಬಳಿಯನ್ನು ನೇಯ್ದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರ ಮೂಲಕ ಅಯೋಧ್ಯೆಗೆ ಕಳುಹಿಸಲು ಬಯಸಿದ್ದಾರೆ. ಈ ಕುರಿತು ಮಾತನಾಡಿದ ಗ್ರಾಮದ ಶಾಂತರಾಮ್, ನಾವೆಲ್ಲಾ ರಾಮ ಭಕ್ತರು. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಪೂಜೆಗೆ ಎಂದು ಕಂಬಳಿಯನ್ನು ಭಕ್ತಿಯಿಂದ ನೇಯ್ದಿದ್ದೇವೆ. ಇದನ್ನು ಅಯೋಧ್ಯೆಗೆ ಕಳುಹಿಸಲು ಬಯಸಿದ್ದೆವೆ. ಕಂಬಳಿಯನ್ನು ನಾವು ಪೋಸ್ಟ್ ಮೂಲಕ ಕಳುಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬಾಲರಾಮ ಮೂಡಿ ಬಂದ ಕೃಷ್ಣ ಶಿಲೆ ಸಿಕ್ಕಿದ್ದು ಹೇಗೆ?: ಶಿಲೆಯ ವೈಶಿಷ್ಟ್ಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ