ಕಡೂರು ಕ್ಷೇತ್ರವನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳುವುದು ನಮ್ಮ ಗುರಿ: ಮಾಜಿ ಸಚಿವ ಎಚ್.ಡಿ.ರೇವಣ್ಣ - chikkamagaluru
ಚಿಕ್ಕಮಗಳೂರು: ಕಡೂರು ಕ್ಷೇತ್ರದ ಜನರು ದೇವೇಗೌಡರನ್ನು, ಪ್ರಜ್ವಲ್ ಅವರ ಕೈ ಹಿಡಿದಿದ್ದಾರೆ. ಕ್ಷೇತ್ರದ ಮತದಾರರ ಋಣ ನಮ್ಮ ಮೇಲಿದೆ. ಕಡೂರು ಕ್ಷೇತ್ರವನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳುವುದು ನಮ್ಮ ಗುರಿ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ, ಕಡೂರಿನ ನಂದಿ ಕ್ರೀಡಾ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ದೇವೇಗೌಡರು ಕ್ಷೇತ್ರಕ್ಕೆ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ.
ಗೌಡರ ಅನುದಾನ ಮತ್ತು ನಾನು ಸಚಿವನಾಗಿದ್ದಾಗ ಕ್ಷೇತ್ರಕ್ಕೆ 250 ಕೋಟಿಗೂ ಹೆಚ್ಚು ಅನುದಾನ ನೀಡಿದ್ದೆವು. ಈ ಹಿಂದೆ ಕೆ.ಎಂ. ಕೃಷ್ಣಮೂರ್ತಿ, ಧರ್ಮೇಗೌಡರ ಕೊಡುಗೆಯನ್ನು ಜನ ಮರೆತಿಲ್ಲ. ಇನ್ನು ದೇವೇಗೌಡರು ದತ್ತ ಅವರನ್ನು ಹೇಗೆ ನೋಡಿ ಕೊಂಡರು ಎಂಬುದು ವಿಶೇಷವಾಗಿ ಹೇಳಬೇಕಿಲ್ಲ. ಆದರೂ ಅವರು ಕಾಂಗ್ರೆಸ್ಗೆ ಹೋಗಿದ್ದಾರೆ, ಹಿಂದೆ ಬಿ.ಎಲ್. ಶಂಕರ್ ಅವರು ಹೀಗೆ ಪಕ್ಷದಲ್ಲಿ ಎತ್ತರಕ್ಕೆ ಬೆಳೆದು ಕಾಂಗ್ರೆಸ್ ಪಕ್ಷಕ್ಕೆ ಹೋದರು. ಈಗ ಅವರ ಸ್ಥಿತಿ ಏನಾಗಿದೆ? ದತ್ತ ಅವರಿಗೆ ಒಳ್ಳೆಯದಾಗಲಿ ಎಂಬುದಷ್ಟೇ ನಮ್ಮ ಹಾರೈಕೆ ಎಂದರು.
ಪಂಚಾಯಿತಿಗೊಂದು ಆಸ್ಪತ್ರೆ: ನಾಗರಿಕರಿಗೆ ನೆಮ್ಮದಿಯಾಗಿ ಬದುಕಲು ಬೇಕಾದ ಸೌಲಭ್ಯಗಳನ್ನು ನೀಡುವ ಆಶಯ ಕುಮಾರಸ್ವಾಮಿ ಅವರದ್ದು, ಅದರ ಭಾಗವೇ ಪಂಚರತ್ನ ಯಾತ್ರೆ. ಅದು ಸಾಕಾರ ವಾಗುತ್ತದೆ ಎನ್ನವುದರಲ್ಲಿ ಅನುಮಾನವಿಲ್ಲ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ದ. ಕಡೂರಿನಲ್ಲೂ ಸಹ ಮತ್ತೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಮ್ಮ ಶ್ರಮ ನಿರಂತರ ಎಂದು ಹೇಳಿದರು.
ಇದನ್ನೂ ಓದಿ:ಹಾಸನದಲ್ಲಿ ಐಐಟಿ ನಿರ್ಮಾಣ: ಮಾಜಿ ಮಂತ್ರಿ ರೇವಣ್ಣಗೆ ಶಾಸಕ ಪ್ರೀತಂ ತಿರುಗೇಟು