ಹೊಸ ವರ್ಷಕ್ಕೆ ಗೋವಾದಲ್ಲಿ ಭರ್ಜರಿ ಸ್ವಾಗತ: ಕುಣಿದು ಕುಪ್ಪಳಿಸಿದ ದೇಶಿ, ವಿದೇಶಿ ಮಂದಿ - ಹೊಸ ವರ್ಷ 2023 ಸಂಭ್ರಮಾಚರಣೆ
ಕಾರವಾರ: ನೆರೆಯ ರಾಜ್ಯ ಗೋವಾದಲ್ಲಿ ಹೊಸ ವರ್ಷವನ್ನು ಅದ್ದೂರಿಯಾಗಿ ಹಾಡಿ, ಕುಣಿದು ಕುಪ್ಪಳಿಸಿ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಗೋವಾದ ಕಾಣಕೋಣ, ಪೊಳೇಮ್, ಭಾಘಾ ಕಡಲತೀರದಲ್ಲಿ ದೇಶದ ನಾನಾ ಮೂಲೆಗಳಿಂದ ಆಗಮಿಸಿದ ಹಾಗು ವಿದೇಶಿ ಪ್ರವಾಸಿಗರ ದಂಡೇ ನೆರೆದಿತ್ತು. ಬೀಚ್ ಬಹುತೇಕ ಪ್ರವಾಸಿಗರಿಂದಲೇ ತುಂಬಿದ್ದು, ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ಸಿಡಿಮದ್ದು ಸಿಡಿಸಿ, ಡಿಜೆ ಹಾಡಿಗೆ ಡ್ಯಾನ್ಸ್ ಮಾಡುತ್ತಾ ಹೊಸ ವರ್ಷವನ್ನು ಸ್ವಾಗತಿಸಿದರು.
Last Updated : Feb 3, 2023, 8:38 PM IST