ತಾಯಿ, ಮಕ್ಕಳ ಆಸ್ಪತ್ರೆ ಗುದ್ದಲಿ ಪೂಜೆ: ಶರತ್ ಮತ್ತು ಎಂಟಿಬಿ ಬೆಂಬಲಿಗರ ನಡುವೆ ಕಿತ್ತಾಟ - ಈಟಿವಿ ಭಾರತ ಕನ್ನಡ
ಹೊಸಕೋಟೆ: ಇಲ್ಲಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಸಚಿವ ಎಂಟಿಬಿ ನಾಗರಾಜ್ ಬೆಂಬಲಿಗರು ಪ್ರೋಟೊಕಾಲ್ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ನಗರದ ಹೊರವಲಯದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಭೂಮಿ ಪೂಜೆಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಸುಧಾಕರ್ ಕೂಡ ಆಗಮಿಸಿದ್ದರು. ಸಚಿವರ ಎದುರೇ ಶಾಸಕ ಶರತ್ ಹಾಗೂ ಸಚಿವ ಎಂಟಿಬಿ ಬೆಂಬಲಿಗರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಅತಿ ಹೆಚ್ಚು ಬಿಜೆಪಿ ಮುಖಂಡರುಗಳ ಹೆಸರು ನೋಡಿ ಶಾಸಕ ಶರತ್ ಗರಂ ಆಗಿದ್ದಾರೆ. ಅಲ್ಲದೇ ವೇದಿಕೆ ಮೇಲೆ ಸಚಿವ ಎಂಟಿಬಿ ಬೆಂಬಲಿಗರಿಗೆ ಮಾತ್ರ ಮಣೆ, ನಮ್ಮ ಕಾರ್ಯಕರ್ತರ ಕಡೆಗಣನೆ ಅಂತಾ ಕ್ಯಾತೆ ತೆಗದಿದ್ದಾರೆ. ಈ ವೇಳೆ ಶಾಸಕ ಶರತ್ ಬೆಂಬಲಿಗರು ವೇದಿಕೆಯ ಕೆಳಭಾಗ ನಿಂತು ಗಲಾಟೆ ಮಾಡಿದ್ದಾರೆ. ನಂತರದಲ್ಲಿ ಎಂಟಿಬಿ ಮತ್ತು ಶರತ್ ಬೆಂಬಲಿಗರ ನಡುವೆ ನೂಕಾಟ ತಳ್ಳಾಟ ನಡೆದಿದೆ. ಗಲಾಟೆಯಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದು, 20 ನಿಮಿಷಗಳ ಬಳಿಕ ಕಾರ್ಯಕ್ರಮ ಆರಂಭವಾಗಿದೆ.
Last Updated : Feb 3, 2023, 8:33 PM IST