ಭಾರಿ ಅಗ್ನಿ ಅವಘಡ: 25 ಮನೆಗಳು ಸುಟ್ಟು ಭಸ್ಮ - Incident in Kishtwar
ಕಿಶ್ತ್ವಾರ್(ಜಮ್ಮು ಮತ್ತು ಕಾಶ್ಮೀರ): ಕಿಶ್ತ್ವಾರ್ ಜಿಲ್ಲೆಯ ಇಷ್ಟಿಯಾರಿ ಮತ್ತು ಗಾಂಧಾರಿ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 25 ಮನೆಗಳು ಸುಟ್ಟು ಕರಕಲಾಗಿವೆ. ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿಯ ಸುದ್ದಿ ತಿಳಿದ ತಕ್ಷಣ ಭಾರತೀಯ ಸೇನೆಯ 17 ರಾಷ್ಟ್ರೀಯ ರೈಫಲ್ಸ್, ಕಿಶ್ತ್ವಾರ್ ಪೊಲೀಸ್, ರೆಡ್ ಕ್ರಾಸ್, ಅಗ್ನಿಶಾಮಕ ಮತ್ತು ಸೇವೆಗಳು ಮತ್ತು ಇತರ ಭದ್ರತಾ ಪಡೆಗಳು, ಸ್ಥಳೀಯ ನಿವಾಸಿಗಳು ಸಹ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದರು. ಕೂಡಲೇ ಜಿಲ್ಲಾಡಳಿತ ಸೌಲಭ್ಯ ಕಲ್ಪಿಸಬೇಕು ಎಂದು ಜನರು ಮನವಿ ಮಾಡಿದ್ದಾರೆ.
Last Updated : Feb 3, 2023, 8:30 PM IST