ಕರ್ನಾಟಕ

karnataka

ಸಿಟಿಂಗ್ ಎಂಎಲ್‌ಎಗಳು ಸಂಪರ್ಕದಲ್ಲಿದ್ದಾರೆ ಎಂಬ ಡಿಕೆಶಿ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ: ಕೆ ಎಸ್​ ಈಶ್ವರಪ್ಪ

ETV Bharat / videos

ಎಂಎಲ್‌ಎಗಳು ಸಂಪರ್ಕದಲ್ಲಿದ್ದಾರೆ ಎಂಬ ಡಿಕೆಶಿ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ: ಕೆ ಎಸ್​ ಈಶ್ವರಪ್ಪ - etv bharat kannada

By

Published : Feb 19, 2023, 9:53 PM IST

ಯಾದಗಿರಿ: ಹಾಲಿ ಎಂಎಲ್‌ಎಗಳು ಸಂಪರ್ಕದಲ್ಲಿದ್ದಾರೆ ಎಂಬ ಡಿ ಕೆ ಶಿವಕುಮಾರ್​ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಯಾವ ಬಿಜೆಪಿ ಎಂಎಲ್‌ಎಗಳು ಯಾವುದೇ ಕಾರಣಕ್ಕೂ ಬೇರೆ ಪಕ್ಷಕ್ಕೆ ಹೋಗಲ್ಲ. ಡಿಕೆಶಿ ಹೇಳುವುದೆಲ್ಲ ಬರೀ ಸುಳ್ಳು. ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ತಾಲೂಕಿನ ಮಹಲ್‌ರೋಜಾ ಗ್ರಾಮದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ದರಿಯಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 

ಮೊದಲಿನಿಂದಲೂ ಡಿಕೆಶಿ ಅವರು ಇದೇ ರೀತಿ ಹೇಳುತ್ತಿದ್ದರು. ಆಗ 17 ಜನ ಎಂಎಲ್‌ಎಗಳು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದರು. ಈಗಲೂ ಅದನ್ನೇ ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರ ಮಾಡಿದ ಜನ ಕಲ್ಯಾಣ ಕಾರ್ಯ ಮತ್ತು ಯೋಜನೆಗಳು ಜನಸಾಮಾನ್ಯರಿಗೆ ಅರ್ಥವಾಗಿವೆ. ಈ ಸಲ ನಾವು ಸ್ವತಂತ್ರವಾಗಿ 150 ಸ್ಥಾನ ಗೆಲ್ಲುತ್ತೇವೆ. ಇದರಲ್ಲಿ ಯಾವ ಅನುಮಾನವೂ ಎಲ್ಲ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಶಿವಾಜಿ ಮಹಾರಾಜರು ಭಾರತದ ಚರಿತ್ರೆ ಬದಲಾವಣೆ ಮಾಡಿದ ಯುಗಪುರುಷ-ಸಿ ಎಂ ಬಸವರಾಜ ಬೊಮ್ಮಾಯಿ

ABOUT THE AUTHOR

...view details