ಶನಿ ದೇವರಿಗೆ 1 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಲಶ ಅರ್ಪಿಸಿದ ಭಕ್ತ - ಸೋನೈನಲ್ಲಿರುವ ಭಾಲ್ಗಟ್ ಜ್ಯುವೆಲ್ಲರ್ಸ್ ನ ಆನಂದ್ ಭಾಲ್ಗಟ್
ಅಹಮದ್‌ನಗರ (ಮಹಾರಾಷ್ಟ್ರ):ಶನಿಶಿಂಗ್ನಾಪುರದ ಶನಿ ಭಕ್ತರೊಬ್ಬರು ಶನಿ ಅಮಾವಾಸ್ಯೆಯ ನಿಮಿತ್ತ ಒಂದು ಕೋಟಿ ರೂಪಾಯಿ ಮೌಲ್ಯದ 700 ಗ್ರಾಂ ಚಿನ್ನ ಮತ್ತು ಐದು ಕೆಜಿ ಬೆಳ್ಳಿಯ ಕಲಶವನ್ನು ಸಿದ್ಧಪಡಿಸಿ ಶನಿ ದೇವರಿಗೆ ಅರ್ಪಿಸಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ನಂತರ ಬಂದಿರುವ ಪೌರ್ಷ ಶನಿ ಅಮಾವಾಸ್ಯೆಗಾಗಿ ಶನಿವಾರ ಮತ್ತು ಭಾನುವಾರ ದಿನದಂದು ಶನಿ ಶಿಂಗ್ನಾಪುರದ ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ಒಡಿಶಾದ ಶನಿ ಭಕ್ತರೊಬ್ಬರು ತಮ್ಮ ಕುಟುಂಬಸಮೇತ ಶನಿಮೂರ್ತಿಯ ಪಾದಕ್ಕೆ ಒಂದು ಕೋಟಿ ರೂಪಾಯಿ ಚಿನ್ನ ಮತ್ತು ಬೆಳ್ಳಿ ಕಲಶ ಅರ್ಪಿಸಿದರು. ಈ ವ್ಯಕ್ತಿ ತನ್ನ ಹೆಸರನ್ನು ಬಹಿರಂಗಪಡಿಸದಂತೆ ದೇವಾಲಯದ ಆಡಳಿತವನ್ನು ವಿನಂತಿಸಿದ್ದಾರೆ ಎಂದು ತಿಳಿದುಬಂದಿದೆ. ಬೃಹತ್ ಮೊತ್ತದ ಚಿನ್ನದ ಕಲಶವನ್ನು ಶನಿ ಅಮಾವಾಸ್ಯೆಯಂದು ಸಂಜೆ ನಡೆದ ಆರತಿಯ ನಂತರ ಶನಿ ದೇವರಿಗೆ ಶಾಸ್ತ್ರೋಕ್ತವಾಗಿ ಅರ್ಪಿಸಲಾಗಿದೆ.
ಆಕರ್ಷಕ ಕಲಶವನ್ನು ಸೋನೈನಲ್ಲಿರುವ ಭಾಲ್ಗಟ್ ಜ್ಯುವೆಲ್ಲರ್ಸ್‌ನ ಆನಂದ್ ಭಾಲ್ಗಟ್ ಎಂಬವರು ತಯಾರಿಸಿದ್ದಾರೆ. ಕಲಶದ ಮೇಲೆ ಶ್ರೀ ಶನೇಶ್ವರಾಯ ನಮಃ ಎಂದು ಕೆತ್ತಲಾಗಿದೆ. ಶನಿದೇವನ ಮಂತ್ರವೂ ಇದೆ. ಶನಿಶಿಂಗ್ನಾಪುರಕ್ಕೆ ಇತ್ತೀಚೆಗೆ ಅರ್ಪಣೆಯಾಗಿರುವ ಅತಿ ದೊಡ್ಡ ಕೊಡುಗೆ ಇದಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ದೇಗುಲ ದಾನಿಯ ಹೆಸರು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ:ಬಳ್ಳಾರಿಯಲ್ಲಿ 23 ಅಡಿ ಎತ್ತರದ ಡಾ.ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ