ನಾವು ಇಂದು ವಿಶ್ವಕಪ್ ಎತ್ತಿ ಹಿಡಿಯುವ ಭರವಸೆ ಇದೆ: ಸಚಿನ್ ತೆಂಡೂಲ್ಕರ್
Published : Nov 19, 2023, 10:19 AM IST
ಅಹಮದಾಬಾದ್:ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ಇನ್ನೇನು ಕೆಲವೇ ಗಂಟೆಗಳ ಅವಧಿಯಲ್ಲಿ ಪ್ರಾರಂಭವಾಗಲಿದೆ. ಇಡೀ ವಿಶ್ವವೇ ಈ ಪಂದ್ಯಕ್ಕಾಗಿ ಕುತೂಹಲದಿಂದ ಕಾಯುತ್ತಿದೆ. ಭಾರತ ಫೈನಲ್ ಪ್ರವೇಶ ಮಾಡಿರುವುದರಿಂದ ಕಾತುರ ಇನ್ನಷ್ಟು ಹೆಚ್ಚಾಗಿದ್ದು, ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪಂದ್ಯ ವೀಕ್ಷಿಸಲು ಈಗಾಗಲೇ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಭಾರತ ತಂಡಕ್ಕೆ ನನ್ನ ಶುಭ ಹಾರೈಕೆಗಳನ್ನು ತಿಳಿಸಲು ಇಲ್ಲಿಗೆ ಬಂದಿದ್ದೇನೆ. ನಾವು ಇಂದು ಟ್ರೋಫಿಯನ್ನು ಎತ್ತೇ ಎತ್ತುತ್ತೇವೆ ಎಂಬ ಭರವಸೆ ಇದೆ. ಎಲ್ಲರೂ ಈ ದಿನಕ್ಕಾಗಿ ಕಾಯುತ್ತಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ: ಬೆನ್ನ ಹಿಂದೆ ಬಂಡೆಯಂತಿರುವ ಕೋಚ್ ದ್ರಾವಿಡ್ಗಾಗಿ ಕಪ್ ಗೆಲ್ಲುತ್ತೇವೆ : ರೋಹಿತ್ ಶರ್ಮಾ
ಇನ್ನೊಂದೆಡೆ, ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ಬರಲಿ ಎಂದು ಹಾರೈಸಿ ದೇಶಾದ್ಯಂತ ವಿಶೇಷ ಪೂಜೆ, ಹೋಮ, ಹವನ ಕಾರ್ಯಗಳು ನಡೆಯುತ್ತಿವೆ.
ಇದನ್ನೂ ಓದಿ:ಐಸಿಸಿ ಏಕದಿನ ವಿಶ್ವಕಪ್ ಫೈನಲ್ : ಕೊಹ್ಲಿ, ಅಶ್ವಿನ್ಗೆ ವಿಶಿಷ್ಟ ದಾಖಲೆ ಬರೆಯುವ ಅವಕಾಶ