ಹಿಟ್ ಅಂಡ್ ರನ್ ಕೇಸ್: ಗಂಟೆಗೆ 167 ಕಿಮೀ ವೇಗದಲ್ಲಿ ಬಂದು ದಂಪತಿಗೆ ಗುದ್ದಿದ ಬಿಎಂಡಬ್ಲ್ಯೂ
ಅಹಮದಾಬಾದ್ : ನಗರದ ಸಿಮ್ಸ್ ಆಸ್ಪತ್ರೆಯಿಂದ ಝೈಡಸ್ ಆಸ್ಪತ್ರೆವರೆಗಿನ ರಸ್ತೆಯಲ್ಲಿ ಬಿಎಂಡಬ್ಲ್ಯು ಕಾರಿನಿಂದಾದ ಹಿಟ್ ಅಂಡ್ ರನ್ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಚಾಲಕ ಪಾನಮತ್ತನಾಗಿ ಕಾರನ್ನು ಪೂರ್ಣ ವೇಗದಲ್ಲಿ ಚಲಾಯಿಸಿ ದಂಪತಿಗೆ ಗುದ್ದಿದ್ದಾನೆ ಎಂಬುದಾಗಿ ಶಂಕಿಸಲಾಗಿದೆ. ಇದರಿಂದ ಅವರಿಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಘಟನೆಯಿಂದ ಕಾರಿನ ಮುಂಭಾಗದ ಭಾಗ ಮುರಿದು ಬಿದ್ದಿದೆ. ಈ ಘಟನೆಯ ಆಧಾರದ ಮೇಲೆ ಎನ್ ಡಿವಿಷನ್ ಟ್ರಾಫಿಕ್ ಪೊಲೀಸರು ಮತ್ತು ಸೋಲಾ ಪೊಲೀಸರು ಎರಡು ವಿಭಿನ್ನ ಅಪರಾಧಗಳ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಘಟನೆಯ ನಂತರ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಅಲ್ಲಿ ನೆರೆದಿದ್ದ ಜನರು ಕಾರಿನಲ್ಲಿ ಮದ್ಯದ ಬಾಟಲಿಯನ್ನು ಪತ್ತೆ ಮಾಡಿದ್ದಾರೆ. ನಂತರ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪಘಾತದ ನಂತರ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಎನ್ ವಿಭಾಗದ ಸಂಚಾರ ಪೊಲೀಸ್ ಎಸಿಪಿ ಅಶೋಕ್ ರಥ್ವಾ ತಿಳಿಸಿದ್ದಾರೆ.
ಈ ಕಾರಿನಿಂದ ಮದ್ಯದ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು. ಈ ಘಟನೆ ಬಗ್ಗೆ ಐಪಿಸಿ 279, 337, 338, ಎಂವಿ 177, 184 ಮತ್ತು 134 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ತನಿಖೆಯಲ್ಲಿ ಪ್ರತಿ ಜಂಕ್ಷನ್‌ನಿಂದ ಸಿಸಿಟಿವಿ ಫೂಟೇಜ್ಗಳನ್ನು ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ ಕಾರಿನಲ್ಲಿ ಸತ್ಯಂ ಶರ್ಮಾ ಎಂಬುವರ ಪಾಸ್‌ಬುಕ್ ಪತ್ತೆಯಾಗಿದೆ. ಈ ಘಟನೆಯಲ್ಲಿ ಕಾರಿನ ವೇಗವನ್ನು ತಿಳಿಯಲು ಆ ಘಟನೆಯ ಫೂಟೇಜ್ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಅವರು ಕಾರಿನ ವೇಗವನ್ನು ಕಳುಹಿಸುತ್ತಾರೆ. ಸದ್ಯ ಕಾರು ಯಾರದ್ದು, ಎಂದು ಪೊಲೀಸರು ಪರಿಶೀಲನೆ ನಡೆಸಿದಾಗ ಇಡೀ ಕುಟುಂಬ ತಲೆಮರೆಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಓದಿ :ವಿದೇಶಕ್ಕೆ ತೆರಳಿ ಮದುವೆಗೆ ನಿರಾಕರಿಸಿದ ಪ್ರೇಯಸಿ.. ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ!