ಕರ್ನಾಟಕ

karnataka

ಹೆಚ್ಚಿದ ತಾಪಮಾನ, ಬಳ್ಳಾರಿಯಲ್ಲಿ ಪೊಲೀಸ್​​ ಶ್ವಾನಗಳಿಗೆ ವಿಶೇಷ ಆರೈಕೆ

ETV Bharat / videos

ಹೆಚ್ಚಿದ ತಾಪಮಾನ, ಬಳ್ಳಾರಿಯಲ್ಲಿ ಪೊಲೀಸ್​​ ಶ್ವಾನಗಳಿಗೆ ವಿಶೇಷ ಆರೈಕೆ - bellary news

By

Published : Apr 26, 2023, 5:20 PM IST

ಬಳ್ಳಾರಿ: ಗಡಿನಾಡು ಬಳ್ಳಾರಿ ಜಿಲ್ಲೆಯಲ್ಲಿ ದಾಖಲೆ ಮಟ್ಟದಲ್ಲಿ (42 ಡಿಗ್ರಿ ಸೆಲ್ಸಿಯಸ್‌) ಉಷ್ಣಾಂಶ ಏರಿಕೆಯಾಗಿದೆ. ಬಿಸಿಲ ಬೇಗೆ ದಿನೇ ದಿನೆ ಹೆಚ್ಚುತ್ತಿದೆ. ಬಿಸಿಲ ಬೇಗೆಗ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳಿಗೂ ಸಂಕಷ್ಟ ತಂದೊಡ್ಡಿದೆ. ಹೀಗಾಗಿ ಬಳ್ಳಾರಿ ಪೊಲೀಸ್ ಇಲಾಖೆ ತಾಪಮಾನ ಹೆಚ್ಚಾಗುತ್ತಿದ್ದಂತೆ ಇಲಾಖೆಯ ಶ್ವಾನಗಳಿಗೆ ವಿಶೇಷ ವ್ಯವಸ್ಥೆ  ಮಾಡಿದೆ. 

ಬಳ್ಳಾರಿಯ ಡಿಎಆರ್ ಮೈದಾನದ ಕೊಠಡಿಯಲ್ಲಿರುವ ವಿದೇಶಿ ತಳಿಯ ಆರು ಶ್ವಾನಗಳಿಗೆ ರಾಯಲ್ ಟ್ರೀಟ್​​ಮೆಂಟ್ ನೀಡಲಾಗುತ್ತಿದೆ. ಶ್ವಾನಗಳ ಕೊಠಡಿಯಲ್ಲಿ ಏರ್​​ ಕೂಲರ್, ಫ್ಯಾನ್, ಎಕ್ಸಿಟ್ ಫ್ಯಾನ್ ಅಳವಡಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಪೊಲೀಸರ ಕರ್ತವ್ಯದ ಜತೆ ಕೈ ಜೋಡಿಸಿ ಕೆಲಸ ಮಾಡುವ ಶ್ವಾನಗಳಿಗೆ ಬೇಸಿಗೆ ಬಿಸಿಲಿನ ತಾಪ ತಟ್ಟದಂತೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಎಳನೀರು ವ್ಯವಸ್ಥೆ: ಇಲ್ಲಿಯ ನಾಯಿಗಳಿಗೆ ನಿತ್ಯ ಎಳನೀರು, ದ್ರವ ಪದಾರ್ಥಗಳಾದ ಗ್ಲೂಕಾನ್ ಡಿ ಹಾಗೂ ಶಕ್ತಿವರ್ಧಕಗಳನ್ನು ನೀಡಲಾಗುತ್ತಿದೆ. ಜತೆಗೆ ರಾಗಿ ಮಾಲ್ಟ್ ಸೇರಿದಂತೆ ಇನ್ನಿತರ ದ್ರವರೂಪದ ಪದಾರ್ಥಗಳನ್ನ ಕೊಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ನಿತ್ಯ ಸರಾಸರಿ 42 ಡಿಗ್ರಿ ಉಷ್ಣಾಂಶವಿದ್ದು, ಮುಂದಿನ ದಿನಗಳಲ್ಲಿ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. 

ನಮಗೆ ಬೆವರಿನ ಮೂಲಕ ತಾಪಮಾನ ಕಡಿಮೆಯಾಗುತ್ತದೆ. ಆದರೆ, ನಾಯಿಗಳು ಬಾಯಿ ಮೂಲಕ ತಾಪಮಾನ ಕಡಿಮೆ ಮಾಡಿಕೊಳ್ಳಬೇಕು. ಈ ಕಾರಣಕ್ಕೆ ಬೇಸಿಗೆ ಕಾಲದಲ್ಲಿ ವಿದೇಶಿ ತಳಿಯ ಪೊಲೀಸ್ ಶ್ವಾನಗಳಿಗೆ ಕೂಲರ್, ತಣ್ಣೀರಿನ ಸ್ನಾನ ಮಾಡಿಸುವ ಮೂಲಕ ವಿಶೇಷ ಆರೈಕೆ ಮಾಡಲಾಗುತ್ತಿದೆ. ಸದ್ಯ ಡಿಎಆರ್ ಮೈದಾನದಲ್ಲಿರುವ ಶ್ವಾನಗಳ ಕೊಠಡಿಗಳಲ್ಲಿ ಒಟ್ಟು 6 ಶ್ವಾನಗಳಿದ್ದು, ಪ್ರತಿ ಶ್ವಾನಕ್ಕೂ ಒಂದೊಂದು ಏರ್ ಕೂಲರ್​ ವ್ಯವಸ್ಥೆ ಮಾಡಲಾಗಿದೆ. 

ಬಿಸಿಲಿನ ತಾಪಮಾನದಿಂದ ಪಾರಾಗಲು ಮನುಷ್ಯರು ಎಸಿ, ಕೂಲರ್, ಮೊರೆ ಹೋದಂತೆ, ಪೊಲೀಸ್ ಶ್ವಾನಗಳಿಗೂ ಇದೇ ಸೌಲಭ್ಯ ಸಿಗುತ್ತಿದೆ ಎನ್ನುವುದು ವಿಶೇಷ. ಯಾವುದೇ ಅಪರಾಧ ಘಟನೆ ನಡೆದರೂ ಅದನ್ನ ಪತ್ತೆ ಹಚ್ಚಲು ಈ ಶ್ವಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಇವುಗಳ ಆರೋಗ್ಯದಲ್ಲಿ ಏರುಪೇರು ಆಗದಂತೆ ರಕ್ಷಣೆ ಮಾಡುತ್ತಿರುವ ಪೊಲೀಸರ ಕಾರ್ಯ ನಿಜಕ್ಕೂ ಇತರರಿಗೆ ಮಾದರಿ.

ಇದನ್ನೂ ಓದಿ:ಯುವತಿ ಜೊತೆ ಚಾಲಕ ಅನುಚಿತ ವರ್ತನೆ: ಚಲಿಸುತ್ತಿದ್ದ ರ‍್ಯಾಪಿಡೊ ಬೈಕ್​ನಿಂದ ಜಿಗಿದ ಯುವತಿ

ABOUT THE AUTHOR

...view details