ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 67 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ವಶ! - etv bharat kannada
ಹೈದರಾಬಾದ್ (ತೆಲಂಗಾಣ): ರಿಯಾದ್‌ನಿಂದ ಹೈದರಾಬಾದ್ ವಿಮಾನ ನಿಲ್ದಾಣದಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರಿಂದ ಭಾನುವಾರ 67 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ, ಪ್ರಯಾಣಿಕ ಪ್ಯಾಕ್ಸ್ ರಿಯಾದ್‌ನಿಂದ ಬಹ್ರೇನ್ ಮೂಲಕ ಹೈದರಾಬಾದ್‌ಗೆ ತಲುಪಿದ್ದಾನೆ ಎಂದು ತಿಳಿಸಿದ್ದಾರೆ.
ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕ ಮಾಹಿತಿಯ ಆಧಾರದ ಮೇಲೆ, ಬೆಳಗ್ಗೆ 5:30ಕ್ಕೆ GF-274 (ಗಲ್ಫ್ ಏರ್‌ಲೈನ್ಸ್) ವಿಮಾನದಲ್ಲಿ ಬಂದ ಪುರುಷ ಪ್ರಯಾಣಿಕನನ್ನು ಹೈದರಾಬಾದ್ ಕಸ್ಟಮ್ಸ್ ಮತ್ತು RGIAನ ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ತಂಡವು ತಡೆದು ಆತನ ಲಗೇಜನ್ನು ತಪಾಸಣೆ ನಡೆಸಿದಾಗ ಅದರಲ್ಲಿದ್ದ ಎಮರ್ಜೆನ್ಸಿ ಲೈಟ್ನ ಬ್ಯಾಟರಿಯೊಳಗೆ 24 ಕ್ಯಾರೆಟ್ ಶುದ್ಧತೆಯ 14 ಚಿನ್ನದ ಗಟ್ಟಿಗಳನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ. ವಶಪಡಿಸಿಕೊಂಡ ಚಿನ್ನದ ಗಟ್ಟಿಗಳ ಒಟ್ಟು ತೂಕ 1287.6 ಗ್ರಾಂ ಇದ್ದು, ಇದರ ಮೌಲ್ಯ ಸುಮಾರು 67,96,133 ರೂ. ಆಗಿದೆ. ಈ ಸಂಬಂಧ ಪ್ರಯಾಣಿಕನನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಹೈದರಾಬಾದ್ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಕೇರಳದಲ್ಲಿ 12,000 ಕೋಟಿ ರೂ ಮೌಲ್ಯದ ಮಾದಕ ವಸ್ತು ಜಪ್ತಿ! ಪಾಕ್ ಪ್ರಜೆ ಎನ್‌ಸಿಬಿ ವಶಕ್ಕೆ