Gas cylinder truck fire: ಟ್ರಕ್ಗೆ ಬೆಂಕಿ ಬಿದ್ದು ಬಾಂಬ್ಗಳಂತೆ ಸ್ಫೋಟಗೊಂಡ ಸಿಲಿಂಡರ್‌ಗಳು - ವಿಡಿಯೋ - ಟ್ರಕ್ನಲ್ಲಿ ಬೆಂಕಿ
ತೆಹ್ರಿ (ಉತ್ತರಾಖಂಡ):200ಕ್ಕೂ ಹೆಚ್ಚು ಎಲ್‌ಪಿಜಿ ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ನಲ್ಲಿ ಬೆಂಕಿ ಕಾಣಿಕೊಂಡು ಸುಮಾರು 40 ಸಿಲಿಂಡರ್‌ಗಳು ಸ್ಫೋಟಗೊಂಡ ಘಟನೆ ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ನಡೆದಿದೆ. ಬಾಂಬ್ ರೀತಿಯಲ್ಲಿ ಸಿಲಿಂಡರ್‌ಗಳು ಸ್ಫೋಟಗೊಂಡು ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದಿವೆ. ಅದಾಗ್ಯೂ ಭೀಕರ ದುರಂತದಲ್ಲಿ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಲ್ಲಿನ ಕಂಡಿಖಾಲ್ ಮಗ್ರೋನ್ ಬಳಿ ತೆಹ್ರಿ - ಶ್ರೀನಗರ ಹೆದ್ದಾರಿಯಲ್ಲಿ ಘನಸಾಲಿ ಕಡೆಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಟ್ರಕ್ ಸಾಗಿಸಿತ್ತು. ಈ ವೇಳೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ಸ್ಫೋಟದ ಸದ್ದಿನೊಂದಿಗೆ ಗ್ಯಾಸ್ ಸಿಲಿಂಡರ್‌ಗಳ ಸಿಡಿಯಲು ಆರಂಭಿಸಿವೆ. ಜೊತೆಗೆ ಸ್ಫೋಟದಿಂದಾಗಿ ಇಡೀ ಪ್ರದೇಶದಲ್ಲಿ ಹೊಗೆ ಆವರಿಸಿದೆ. ಭಯಾನಕ ಸದ್ದು ಕೇಳಿ ಸ್ಥಳೀಯರು ಹೆದ್ದಾರಿಗೆ ಧಾವಿಸಿದ್ದಾರೆ. ಅಲ್ಲದೇ, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ, ಕ್ಷಣಾರ್ಧದಲ್ಲಿ ಟ್ರಕ್ ಸುಟ್ಟು ಭಸ್ಮವಾಗಿದೆ.
ಮತ್ತೊಂದೆಡೆ, ಲಾರಿಗೆ ಬೆಂಕಿ ಹೊತ್ತಿಕೊಂಡ ಸ್ವಲ್ಪ ಹೊತ್ತಿನಲ್ಲೇ ಮಳೆ ಸುರಿದಿದೆ. ಇದರಿಂದಾಗಿ ಬೆಂಕಿ ನಂದಿದೆ. ಈ ಘಟನೆ ನಂತರ ಕೆಲ ಗಂಟೆಗಳ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ನಂತರ ಸ್ಥಳಕ್ಕೆ ಬಂದ ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಟ್ರಕ್ ಹಾಗೂ ಸಿಲಿಂಡರ್‌ಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ:ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹೊತ್ತಿ ಉರಿದ ಕಾರು, ನಾಲ್ವರು ಸಜೀವ ದಹನ..!