ಉರ್ದು ಶಾಲೆಯಲ್ಲಿ ಗಣೇಶ ಪೂಜೆ.. ಭಾವೈಕ್ಯತೆ ಸಾರಿದ ಮುಸ್ಲಿಂ ವಿದ್ಯಾರ್ಥಿಗಳು - ganesha festival in primary school
Published : Sep 18, 2023, 7:21 PM IST
|Updated : Sep 18, 2023, 10:06 PM IST
ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ತಂಬ್ರಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಗಣೇಶೋತ್ಸವ ಆಚರಿಸಿ ಭಾವೈಕ್ಯತೆ ಸಾರಿದರು.
ಮುಖ್ಯ ಶಿಕ್ಷಕ ಎಲ್ ರೆಡ್ಡಿ ನಾಯ್ಕ ಹಾಗೂ ಶಿಕ್ಷಕಿ ಶಾಖಿರ ಬೇಗಮ್ ಮಾತನಾಡಿದರು. ಮಕ್ಕಳ ಪಾಲಕರು ಹಾಗೂ ಮಕ್ಕಳೊಂದಿಗೆ ಕಾಲ್ನಡಿಗೆಯ ಮೆರವಣಿಗೆಯ ಮುಖಾಂತರ ಗಣೇಶನನ್ನು ಶಾಲೆಗೆ ತಂದು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ನೂರಾರು ಮುಸ್ಲಿಂ ವಿದ್ಯಾರ್ಥಿಗಳಿಂದ ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿ ಧಾರ್ಮಿಕ ಭಾವೈಕ್ಯತೆ ಸಾರಿದರು.
ಇದೇ ವೇಳೆ ಶಾಲೆಯ ಎಸ್ಡಿಎಂಸಿ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ನಂತರ ಶಾಲೆಯ ಎಲ್ಲಾ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು. ಭವ್ಯ ಭಾರತದ ಪ್ರಗತಿಗೆ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಕರೇ ಕಾರಣ ಎಂದು ಎಸ್ಡಿಎಂಸಿಯ ಅಧ್ಯಕ್ಷ ಶುಕುರ್ಸಾಬ್ ಹೇಳಿದರು.
ಎಸ್ಡಿಎಂಸಿ ಉಪಾಧ್ಯಕ್ಷ ರಾಜ ಸಾಬ್, ಸದಸ್ಯರಾದ ರೇಷ್ಮಾಬಿ, ಶಮಿಮ್ ಬಾನು, ಗಂಗಮ್ಮ, ಜಮೀರ್ ಭಾಷಾ, ಗ್ರಾ ಪಂ ಸದಸ್ಯ ಮೆಹಬೂಬ್ ಬಾಷಾ, ಶಿಕ್ಷಕರಾದ ಮಮ್ತಾಜ್ ಬೇಗಂ, ಶೈನಾಜ್ ಬೇಗಂ ರವಿಕುಮಾರ ಸಕ್ರಹಳ್ಳಿ, ಚಂದ್ರಶೇಖರ್ ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು.
ಇದನ್ನೂ ಓದಿ :ಸರ್ವಧರ್ಮ ಸಮನ್ವಯತೆ ಸಾರುವ ಗಣೇಶೋತ್ಸವ.. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಹಬ್ಬ ಆಚರಣೆ