ಯುನೆಸ್ಕೋ ಮಾನ್ಯತೆಯ ಉದಯಗಿರಿ, ಖಂಡಗಿರಿ ಗುಹೆಗಳಿಗೆ ಜಿ 20 ಪ್ರತಿನಿಧಿಗಳ ಭೇಟಿ: ವಿಡಿಯೋ
ಭುವನೇಶ್ವರ (ಒಡಿಶಾ): 2ನೇ ಜಿ 20 ಕಲ್ಚರ್ ವರ್ಕಿಂಗ್ ಗ್ರೂಪ್ ಸಭೆಯ ಹಿನ್ನೆಲೆಯಲ್ಲಿ ಜಿ 20 ಪ್ರತಿನಿಧಿಗಳು ಇಂದು ಒಡಿಶಾ ರಾಜಧಾನಿ ಭುವನೇಶ್ವರ ಬಳಿಯ ಖಂಡಗಿರಿ ಹಾಗು ಉದಯಗಿರಿ ಗುಹೆಗಳಿಗೆ ಭೇಟಿ ನೀಡಿದರು. ಜಿ20 ಸಭೆಯ ವಿಷಯ 'ಸಂಸ್ಕೃತಿ ಎಲ್ಲರನ್ನೂ ಒಂದುಗೂಡಿಸುತ್ತದೆ' ಎಂಬುದಾಗಿದೆ. ಇದು ವೈವಿಧ್ಯಮಯ ಸಂಸ್ಕೃತಿ ಮತ್ತು ಸಮುದಾಯಗಳ ನಡುವೆ ಶಾಂತಿಯುತ ಸಹಬಾಳ್ವೆಯ ಆಧಾರದ ಮೇಲೆ ವೈವಿಧ್ಯತೆಯಲ್ಲಿ ಭಾರತದ ಅಚಲವಾದ ನಂಬಿಕೆಯನ್ನು ಎತ್ತಿ ತೋರಿಸುವ ಮಹತ್ವದ ಅಭಿಯಾನವಾಗಿದೆ.
2ನೇ ಜಿ20 ಕಲ್ಚರ್ ವರ್ಕಿಂಗ್ ಗ್ರೂಪ್ ಸಭೆ ಭುವನೇಶ್ವರದಲ್ಲಿ ಮೇ 14 ರಿಂದ ಆರಂಭವಾಗಿದ್ದು, ಮೇ 17 ರವರೆಗೆ ನಡೆಯಲಿದೆ. ಜಿ 20 ರಾಷ್ಟ್ರಗಳು, ಅತಿಥಿ ರಾಷ್ಟ್ರಗಳು ಮತ್ತು ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಭುವನೇಶ್ವರದಲ್ಲಿ ನಡೆದ ಎರಡನೇ ಕಲ್ಚರ್ ವರ್ಕಿಂಗ್ ಗ್ರೂಪ್ ಸಭೆಯು ಮಧ್ಯಪ್ರದೇಶದ ಖಜುರಾಹೊದಲ್ಲಿ ನಡೆದ ಮೊದಲ ಕಲ್ಚರ್ ವರ್ಕಿಂಗ್ ಗ್ರೂಪ್ ಸಭೆಯ ಮುಂದುವರಿದ ಭಾಗವಾಗಿದೆ. ಖಜುರಾಹೊದಲ್ಲಿ ನಡೆದ ಸಭೆಯ ನಂತರ 2 ತಿಂಗಳ ಕಾಲ ಜಾಗತಿಕ ವಿಷಯಾಧಾರಿತ ವೆಬ್‌ನಾರ್‌ಗಳನ್ನು ನಡೆಸಲಾಯಿತು. ಸದ್ಯ ಪ್ರತಿನಿಧಿಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ಉದಯಗಿರಿ ಗುಹೆಗಳಿಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ:ಜಿ 20 ಅಡಿ ಯೂತ್ 20 ಇನ್ಸೆಪ್ಶನ್ ಸಭೆ: ಪ್ರಸ್ತುತ ಜಾಗತೀಕ ಸಮಸ್ಯೆಗಳ ಬಗ್ಗೆ ಯುವಜನತೆಯೊಂದಿಗೆ ಚರ್ಚೆ