ಕರ್ನಾಟಕ

karnataka

ETV Bharat / videos

ವಿದ್ಯುತ್ ಸ್ಪರ್ಶದಿಂದ ಬೆಂಕಿ ಹೊತ್ತಿಕೊಂಡು ನಾಲ್ಕು ಎಕರೆ ಬೆಳೆ ಬೆಂಕಿಗಾಹುತಿ.. - etv bharat karnataka

🎬 Watch Now: Feature Video

ವಿದ್ಯುತ್ ಸ್ಪರ್ಶದಿಂದ ಬೆಂಕಿ ಹೊತ್ತಿಕೊಂಡು ನಾಲ್ಕು ಎಕರೆ ಬೆಳೆ ಬೆಂಕಿಗಾಹುತಿ..

By

Published : Feb 13, 2023, 9:56 PM IST

Updated : Feb 14, 2023, 11:34 AM IST

ತುಮಕೂರು:ವಿದ್ಯುತ್ ಸ್ಪರ್ಶದಿಂದ ಬೆಂಕಿ ಹೊತ್ತಿಕೊಂಡು ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಅಡಕೆ ಮತ್ತು ತೆಂಗಿನ ಗಿಡಗಳು ಬೆಂಕಿಗಾಹುತಿಯಾಗಿರುವ ಘಟನೆ ಮಧುಗಿರಿ ತಾಲೂಕಿನ ಬಿಕ್ಕಿನಕುರಿಕೆ ಗ್ರಾಮದಲ್ಲಿ ನಡೆದಿದೆ. ರೈತ ಹನುಮಂತರಾಯಪ್ಪ ಎಂಬವರಿಗೆ ಸೇರಿದ್ದ ನಾಲ್ಕು ಎಕರೆ ಬೆಳೆ ಸುಟ್ಟು ಕರಕಲಾಗಿದೆ. 150 ಅಡಕೆ ಮರಗಳು ಹಾಗೂ 400‌ ತೆಂಗಿನ ಮರಗಳು ಸುಟ್ಟು ಹೋಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸುಮಾರು 25 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಬೆಳೆ ಹಾನಿಯಾಗಿದೆ ಎಂದು ರೈತ ಹನುಮಂತರಾಯಪ್ಪ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇನ್ನು ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೋಟಕೆ ಬೆಂಕಿ ಹತ್ತಿಕೊಳ್ಳಲು ಮುಖ್ಯವಾಗಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ರೈತ ಹನುಮಂತರಾಯಪ್ಪ ಆರೋಪಿಸಿದ್ದಾರೆ. ಈ ಸಂಬಂಧ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ.. ಅಗ್ನಿ ನಂದಿಸಲು ಹೋದ ರೈತ ಸಜೀವ ದಹನ

Last Updated : Feb 14, 2023, 11:34 AM IST

ABOUT THE AUTHOR

...view details